– ಡಿಕೆಶಿ ಮುನಿಸೇ ಸೈನಿಕನಿಗೆ ಮುಳ್ಳಾಗುತ್ತಾ?
ರಾಮನಗರ: ಚನ್ನಪಟ್ಟಣ ಟಿಕೆಟ್ ಗೊಂದಲ ಸದ್ಯಕ್ಕೆ ಬಗೆಹರಿಯುವುದು ಅನುಮಾನ. ‘ದೋಸ್ತಿ’ ಪಾಳಯದಲ್ಲಿನ ರಾಜಕೀಯ ಚಟುವಟಿಕೆ ಗಮನಿಸಿದರೆ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ (C.P.Yogeshwar) ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಗಟ್ಟಿಯಾಗಿದೆ. ಡಿ.ಕೆ.ಶಿವಕುಮಾರ್ ಜೊತೆಗಿನ ಮುನಿಸಿನಿಂದ ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣವಾದಂತೆ ಭಾಸವಾಗುತ್ತಿದೆ.
Advertisement
ಮುಹೂರ್ತಕ್ಕೂ ಮುನ್ನ ಚನ್ನಪಟ್ಟಣ (Channapatna) ಉಪಚುನಾವಣಾ ಕಣ ರಂಗೇರಿದ್ದು, ದೋಸ್ತಿ ಪಾಳಯದಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಒಂದು ಕಡೆ ಹೆಚ್.ಡಿ.ಕುಮಾರಸ್ವಾಮಿ ವರ್ಸಸ್ ಸಿ.ಪಿ.ಯೋಗೇಶ್ವರ್ ಮಧ್ಯೆ ಜಟಾಪಟಿ ನಡೆಯುತ್ತಿದೆ. ಇನ್ನೊಂದು ಕಡೆ ಬಿಜೆಪಿಯಲ್ಲಿ ಯೋಗೇಶ್ವರ್ ಪರ-ವಿರೋಧಿ ಬಣ ಸೃಷ್ಟಿಯಾಗಿದೆ. ಇತ್ತ ಬಿಜೆಪಿ ಹೈಕಮಾಂಡ್ ಅಂಗಳದಲ್ಲಿ ಟಿಕೆಟ್ ಇತ್ಯರ್ಥ ಪೆಂಡಿಂಗ್ ಉಳಿದಿದೆ. ಟಿಕೆಟ್ ಕಾದಾಟಕ್ಕೆ ದೋಸ್ತಿ ಪಾಳಯ 3 ದಿಕ್ಕು 3 ಬಾಗಿಲು ಎಂಬಂತಾಗಿದೆ. ಇದನ್ನೂ ಓದಿ: ಚನ್ನಪಟ್ಟಣ ಕೈವಶಕ್ಕೆ ಡಿಸಿಎಂ ರಣತಂತ್ರ; ಒಂದೇ ವೇದಿಕೆಯಲ್ಲಿ ಡಿಕೆಶಿ-ಸಿಪಿವೈ ಸಮಾಗಮ
Advertisement
Advertisement
ಹೆಚ್ಡಿಕೆ ವಿಶ್ವಾಸಗಳಿಸಿ ಟಿಕೆಟ್ ಪಡೆಯಲು ಯೋಗೇಶ್ವರ್ ವಿಫಲರಾದರಾ ಎಂಬ ಮಾತು ಕೇಳಿಬರುತ್ತಿದೆ. ವರಿಷ್ಠರ ಮಟ್ಟದಲ್ಲಿ ಟಿಕೆಟ್ ಗಿಟ್ಟಿಸಲು ಸಿಪಿವೈ ಸಮರ ಶುರು ಮಾಡಿದ್ದಾರೆ. ಟಿಕೆಟ್ ಸಿಗದಿದ್ದರೆ ಬಂಡಾಯ ಸ್ಪರ್ಧೆಗೂ ಸೈ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಎನ್‌ಡಿಎ ಅಭ್ಯರ್ಥಿ ಮಾಡಿ, ಇಲ್ಲ ಪಕ್ಷೇತರ ಅಭ್ಯರ್ಥಿಯಾಗ್ತೇನೆ ಎಂದಿದ್ದಾರೆ. ದೆಹಲಿಗೆ ಹೋಗಿ ಬಂದ ನಂತರ ನಿನ್ನೆ ಡಿಕೆಶಿ ಜತೆ ವೇದಿಕೆ ಹಂಚಿಕೊಂಡಿದ್ದರು. ಆ ಮೂಲಕ ಯಾವುದೇ ನಡೆಗೂ ರೆಡಿ ಎನ್ನುವ ಸಂದೇಶ ಕೊಟ್ಟಿದ್ದರು.
Advertisement
ಚನ್ನಪಟ್ಟಣ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ನಡೆ ಕುತೂಹಲ ಮೂಡಿಸಿದೆ. ಮೈತ್ರಿ ಧರ್ಮ ಪಾಲನೆ ಮಾಡುತ್ತಾ ಎಂಬ ಪ್ರಶ್ನೆ ಮೂಡಿದೆ. ಬಿಜೆಪಿಯಲ್ಲಿ ಸಿಪಿವೈ ಪರ ಒಂದು ಬಣದಿಂದ ಟಿಕೆಟ್‌ಗೆ ಒತ್ತಾಯ ಕೇಳಿಬರುತ್ತಿದೆ. ಸಿಪಿವೈಗೆ ಟಿಕೆಟ್ ಕೊಡುವಂತೆ ಬಿಜೆಪಿ ಉಪಚುನಾವಣೆ ಸಮಿತಿ ಶಿಫಾರಸು ಮಾಡಿದೆ. ಬಿ.ವೈ ವಿಜಯೇಂದ್ರ ಮಾತ್ರ ಸಿಪಿವೈಗೆ ಟಿಕೆಟ್ ವಿಚಾರದಲ್ಲಿ ಮೌನವಹಿಸಿದ್ದಾರೆ. ಹೆಚ್ಡಿಕೆ ಕಾರಣಕ್ಕೆ ಟಿಕೆಟ್ ವಿಚಾರದಲ್ಲಿ ಮೌನವಾಗಿದ್ದಾರೆ. ಮೈತ್ರಿ ಪಾಲನೆ ಹಿನ್ನೆಲೆ ಹೈಕಮಾಂಡ್ ತೀರ್ಮಾನಿಸಲಿ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ: ಯೋಗೇಶ್ವರ್
ಚನ್ನಪಟ್ಟಣ ಟಿಕೆಟ್ ಪಡೆಯಬೇಕು ಎಂದು ಜೆಡಿಎಸ್ ನಾಯಕರು ಹಠ ಹಿಡಿದಿದ್ದಾರೆ. ಮುಖಂಡರ ಮಾತು ಧಿಕ್ಕರಿಸಿ ಕೇಂದ್ರ ಸಚಿವ ಹೆಚ್‌ಡಿಕೆ ಮೈತ್ರಿ ಪಾಲನೆ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಡಿಕೆ ಶಿವಕುಮಾರ್ ಮತ್ತು ಸಿಪಿ ಯೋಗೇಶ್ವರ್ ಅಕ್ಕಪಕ್ಕ ಕುಳಿತಿದ್ದರೂ ಪರಸ್ಪರರು ಮಾತನಾಡಲಿಲ್ಲ. ತಮ್ಮನ ಸೋಲನ್ನು ಡಿಕೆಶಿ ಇನ್ನೂ ಮರೆತಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಈ ಹಿನ್ನೆಲೆಯಲ್ಲಿ ಯೋಗೇಶ್ವರ್‌ಗೆ ಬಂಡಾಯ ಸ್ಪರ್ಧೆಯೇ ಗಟ್ಟಿ ಎಂಬಂತಾಗಿದೆ. ಕಾಂಗ್ರೆಸ್ ಸೇರ್ಪಡೆ ಹಾದಿ ಮತ್ತಷ್ಟು ಕಠಿಣವಾಗಿದೆ.