ಬೆಂಗಳೂರು: ಕಳೆದ ಒಂದು ತಿಂಗಳಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (Water Problem In Bengaluru) ತೀವ್ರ ಸ್ವರೂಪ ಪಡೆದುಕೊಳ್ತಾ ಇದೆ. ಹನಿ ಹನಿ ನೀರಿಗೂ ಜನ ಪರದಾಡ್ತಿದ್ದಾರೆ. ನೀರು ಪೂರೈಕೆ ಮಾಡೋದ್ರಲ್ಲಿ ಸರ್ಕಾರ ಮತ್ತು ಜಲಮಂಡಳಿ ಸತತ ಪ್ರಯತ್ನ ಮಾಡ್ತಾ ಇದೆ. ಈ ಮಧ್ಯೆ ಜಲಮಂಡಳಿ ಬೆಂಗಳೂರಿನಲ್ಲಿ ನೀರಿನ ಕೊರತೆ ಇರುವ ಪ್ರದೇಶಗಳ ಸರ್ವೆ ಮಾಡಿದೆ. ಪ್ರಮುಖವಾಗಿ 257 ಏರಿಯಾಗಳಲ್ಲಿ ನೀರಿನ ಕೊರತೆ ಇರೋದು ಗೊತ್ತಾಗಿದೆ. ಬೋರ್‍ವೆಲ್‍ಗಳು ಬತ್ತಿ ಹೋಗಿದ್ದು, ಅಂತರ್ಜಲದ ಮಟ್ಟ ಕುಸಿದಿರೋದು ನೀರಿನ ಸಮಸ್ಯೆಗೆ ಕಾರಣವಂತೆ.
Advertisement
ನೀರಿನ ಕೊರತೆ ಇರುವ ಏರಿಯಾಗಳು..!
ಬೆಂಗಳೂರು ದಕ್ಷಿಣ ವಲಯ
* ಹೆಚ್‍ಎಸ್‍ಆರ್ ಲೇಔಟ್
* ಬೊಮ್ಮನಹಳ್ಳಿ
* ಹೊಸಕೆರೆಹಳ್ಳಿ
* ಚಿಕ್ಕಪೇಟೆ
* ಯಲಚೇನಹಳ್ಳಿ
Advertisement
ಬೆಂಗಳೂರು ಪಶ್ಚಿಮ ವಲಯ
* ರಾಜಾಜಿನಗರ 6ನೇ ಬ್ಲಾಕ್
* ಪೀಣ್ಯ
* ಬಾಗಲುಗುಂಟೆ
* ಬಾಪೂಜಿನಗರ
Advertisement
Advertisement
ಬೆಂಗಳೂರು ಪೂರ್ವ ವಲಯ
* ಕೆ.ಆರ್ ಪುರಂ
* ರಾಮಮೂರ್ತಿನಗರ
* ಮಾರತಹಳ್ಳಿ
ಬೆಂಗಳೂರು ಉತ್ತರ
* ಡಿಜೆ ಹಳ್ಳಿ
* ವೈಯಾಲಿಕಾವಲ್
ನೀರಿನ ಕೊರತೆ ಇರುವ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದ್ದು ಜಲಮಂಡಳಿ ಸಿಂಟೆಕ್ಸ್ ವ್ಯವಸ್ಥೆ ಮಾಡಿ ನೀರು ಪೂರೈಕೆಗೆ ಮುಂದಾಗ್ತಿದೆ. ನೀರಿನ ಸಮಸ್ಯೆಗೆ ಯಾವ ಮುಕ್ತಿ ಕಾಣಿಸುತ್ತೋ ಕಾದು ನೋಡಬೇಕಿದೆ.