ಬೀದರ್: ಇಡೀ ಗ್ರಾಮಕ್ಕೆ ನೀರು ಸರಬರಾಜು ಮಾಡುವ ವಾಟರ್ ವಾಲ್ ತಿಪ್ಪೆಗುಂಡಿಯಲ್ಲಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಳ್ಳಿ ಗ್ರಾಮದ 3 ಸಾವಿರ ಜನರು ಪ್ರತಿದಿನ ನೀರು ಕುಡಿಯಲು ಭಯ ಪಡುತ್ತಿರುವ ಸ್ಟೋರಿ ಇದು. ಈ ದೃಶ್ಯ ನೋಡಿದ ಎಂಥವರಿಗೂ ಮೈ ಜುಮ್ ಎನ್ನದೆ ಇರದು. ಈ ನೀರು ಕುಡಿದ್ರೆ ಕಾಯಿಲೆ ಗ್ಯಾರಂಟಿ. ವಾಟರ್ ವಾಲ್ ತಿಪೆಗುಂಡಿಯಲ್ಲಿರುವುದರಿಂದ ಯಾವಾಗಲೂ ನೀರು ಕಲುಷಿತಗೊಂಡಿರುತ್ತದೆ. ಮಳೆಗಾಲ ಬಂದರಂತೂ ಈ ಗ್ರಾಮದ ಜನರ ನೀರಿನ ಗತಿ ಕೇಳೋರೆ ಇಲ್ಲ. ಹತ್ತು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ.
ಈ ಬಗ್ಗೆ ಶೆಂಬೆಳ್ಳಿ ಪಿಡಿಓ ಸುಜಾತರನ್ನು ಕೇಳಿದ್ರೆ ನೀವ್ಯಾರು ಎಂದು ವರದಿಗಾರರನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ನಂತರ ಹೋಗಿ ನೋಡತ್ತೇನೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇನ್ನು ಕ್ಷೇತ್ರದ ಜನರ ಸಮಸ್ಯೆಗೆ ಪರಿಹಾರ ನೀಡಬೇಕಿರುವ ಶಾಸಕ ಪ್ರಭು ಚವ್ಹಾಣ ಕಾಣೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ಗ್ರಾಮದ ಜನರು ಈ ರೀತಿ ಕಲುಷಿತ ನೀರು ಕುಡಿಯುವ ಬವಣೆ ತಪ್ಪಿಲ್ಲ.