ತುಮಕೂರು: ಹತ್ತಾರು ವರ್ಷಗಳಿಂದ ಶಿಥಿಲಗೊಂಡು ಬೀಳುವ ಸ್ಥಿತಿಯಲಿದ್ದ ನೀರಿನ ಟ್ಯಾಂಕ್‍ವೊಂದು ಕೊನೆಗೂ ಧರೆಗುರುಳಿದಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ಆತಂಕ ಸೃಷ್ಟಿ ಮಾಡಿದ್ದ ಓವರ್ ಹೆಡ್ ಟ್ಯಾಂಕ್ ಕೊನೆಗೂ ಧರೆಗುರುಳಿದೆ. ಬೃಹದಾರಾಕಾರದ ಈ ಟ್ಯಾಂಕ್ ಉರುಳಿಸಿವ ದೃಶ್ಯ ಮೈಜುಂ ಎನ್ನುವಂತಿದೆ.
Advertisement
34 ವರ್ಷಗಳ ಹಿಂದೆ ಕಟ್ಟಿದ ಈ ಟ್ಯಾಂಕ್ ಹತ್ತಾರು ವರ್ಷಗಳ ಹಿಂದೆಯೇ ಶಿಥಿಲಗೊಂಡಿತ್ತು. ಪರಿಣಾಮ ಗಾಳಿ ಮಳೆ ಬಂದಾಗ ಅಕ್ಕ ಪಕ್ಕದ ಮನೆಯವರು ಜೀವ ಕೈಯಲ್ಲಿಡಿದು ಬದುಕುತ್ತಿದ್ದರು. ಗ್ರಾಮ ಪಂಚಾಯತಿಯವರಿಗೆ ಎಷ್ಟೇ ಮನವಿ ಮಾಡಿಕೊಂಡಿದ್ದರೂ ಟ್ಯಾಂಕ್ ತೆರವುಗೊಳಿಸುವ ಪ್ರಯತ್ನ ಮಾಡಿರಲಿಲ್ಲ.
Advertisement
ಕೊನೆಗೆ ಹೋರಾಟದ ಎಚ್ಚರಿಕೆ ಕೊಟ್ಟಾಗ ದಾವಣಗೆರೆ ಮೂಲದ ಉಜ್ಜಾನ್ ಅವರು ನಾಲ್ಕು ಜನರ ನೇತೃತ್ವದ ತಂಡ ಕರೆತಂದು ಟ್ಯಾಂಕ್ ಉರುಳಿಸಿದ್ದಾರೆ. ಟ್ಯಾಂಕ್‍ನ ಶಿಥಿಲಗೊಂಡ ಭಾಗದ ಕಂಬಕ್ಕೆ ಬಲವಾಗಿ ಹೊಡೆದು ಟ್ಯಾಂಕ್ ಉರುಳಿಸಲಾಗಿದೆ. ಟ್ಯಾಂಕ್ ಬೀಳುತ್ತಿರುವ ದೃಶ್ಯ ನಿಜಕ್ಕೂ ಎದೆ ಝಲ್ ಎನ್ನಿಸುವಂತಿದೆ.