ಬೆಳಗಾವಿ(ಚಿಕ್ಕೋಡಿ): ಮಹಾರಾಷ್ಟ್ರದಲ್ಲಿ ಬಾರೀ ಮಳೆಯಾಗುತ್ತಿರುವ ಕಾರಣಕ್ಕೆ ಮತ್ತೆ ಕೊಯ್ನಾ ಡ್ಯಾಮ್‍ನಿಂದ 73,063 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಕೃಷ್ಣಾ ನದಿ ನೀರಿನ ಪ್ರಮಾಣ ಮತ್ತೆ ಏರಿಕೆಗೊಂಡಿದೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪಾಟಣ ತಾಲೂಕಿನಲಿ ಕೊಯ್ನಾ ಜಲಾಶಯವಿದ್ದು, ಕಳೆದ ತಿಂಗಳು ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಯಾಗಲು ಕಾರಣವಾಗಿತ್ತು. ಈಗಾಗಲೇ ಕೃಷ್ಣಾ ನದಿ ಪ್ರವಾಹದಿಂದ ಚಿಕ್ಕೋಡಿ ತಾಲೂಕಿನ ಕೆಳಹಂತದ ಯಡೂರು-ಕಲ್ಲೋಳ ಸೇತುವೆ ಜಲಾವೃಗೊಂಡಿದೆ. ಕೃಷ್ಣಾ ನದಿಗೆ ಈ ಸೇತುವೆಯನ್ನು ಅಡ್ಡಲಾಗಿ ನಿರ್ಮಿಸಿಲಾಗಿದೆ. ಕೃಷ್ಣಾ ನದಿಯ ಒಳ ಹರಿವು 48 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಇದೆ. ಅಲ್ಲದೆ ಇಂದು ಕೊಯ್ನಾ ಡ್ಯಾಮ್‍ನಿಂದ ಬಿಟ್ಟಿರುವ ನೀರು ನಾಳೆ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದೆ.
Advertisement
Advertisement
ಕೊಯ್ನಾ ಪ್ರದೇಶದಲ್ಲಿ ಮಂಗಳವಾರ 71 ಮೀ.ಮೀ ಮಳೆಯಾಗಿತ್ತು. ಕೊಯ್ನಾ ಜಲಾಶಯದ ಒಳ ಹರಿವು 86,553 ಕ್ಯೂಸೆಕ್ ಇದೆ. ಹೀಗಾಗಿ ಕೊಯ್ನಾ ಜಲಾಶಯದ ಆಡಳಿತ ಮಂಡಳಿ ಮಳೆ ಪ್ರಮಾಣ ನೋಡಿ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಿದೆ. ಕೊಯ್ನಾ ಜಲಾಶಯ 105 ಟಿಎಂಸಿ ಸಾಮಥ್ರ್ಯವನ್ನು ಹೊಂದಿದೆ. ಸದ್ಯ 104.92 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ. ಆದ್ದರಿಂದ 8 ಅಡಿ ಗೇಟ್ ಎತ್ತರಿಸಿ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ.