ಮಲಪ್ರಭಾ ಜಲಾಶಯದಿಂದ ಬಲದಂಡೆ ಕಾಲುವೆಗೆ ನೀರು ಬಿಡುಗಡೆ

Public TV
1 Min Read
Malaprabha dam 1

ಬೆಳಗಾವಿ: ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ತೀವ್ರ ಬರಗಾಲ (Drought) ಹಿನ್ನೆಲೆ ಮಲಪ್ರಭಾ ಜಲಾಶಯದಿಂದ (Malaprabha Reservoir) ಬಲದಂಡೆ ಕಾಲುವೆಗೆ (Right Bank Canal) ನೀರು ಬಿಡುಗಡೆ ಮಾಡಲಾಯಿತು.

ಜಿಲ್ಲೆಯ ಸವದತ್ತಿ ಪಟ್ಟಣದ ಹೊರವಲಯದಲ್ಲಿರುವ ಜಾಕ್ ವೆಲ್‌ನಿಂದ ನೀರು ರಿಲೀಸ್ ಮಾಡಲಾಗಿದೆ. ನಾಲ್ಕು ಜಿಲ್ಲೆಯ 14 ತಾಲೂಕಿನಲ್ಲಿ ಕುಡಿಯುವ ಸಲುವಾಗಿ ನೀರು ಬಿಡುಗಡೆ ಮಾಡಲಾಗಿದ್ದು, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆ ಸೇರಿ ಒಟ್ಟು 14 ತಾಲೂಕುಗಳಿಗೆ ನೀರು ಹರಿಸಲಾಗಿದೆ. ಸವದತ್ತಿ ಕಾಂಗ್ರೆಸ್ ಶಾಸಕ ವಿಶ್ವಾಸ್ ವೈದ್ಯ, ನವಲಗುಂದ ಶಾಸಕ ಎನ್.ಹೆಚ್ ಕೋನರೆಡ್ಡಿ ಅವರಿಂದ ನೀರು ರಿಲೀಸ್ ಮಾಡಲಾಗಿದೆ. ಇದನ್ನೂ ಓದಿ: ಕಾವೇರಿಗಾಗಿ ಶನಿವಾರ ಮಂಡ್ಯ ಬಂದ್ – ಏನಿರುತ್ತೆ? ಏನಿರಲ್ಲ?

Vishwas Vaidya NH Konareddy

ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ನವಿಲು ತೀರ್ಥ ಜಲಾಶಯದಿಂದ ನಿತ್ಯವೂ 1,000 ಕ್ಯೂಸೆಕ್‌ನಷ್ಟು ನೀರನ್ನು ಕಾಲುವೆಗೆ ಬಿಡುಗಡೆ ಮಾಡಲಾಗುತ್ತದೆ. ಮಲಪ್ರಭಾ ಜಲಾಶಯ 37 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಮಳೆ ಕೊರತೆಯಿಂದ 21 ಟಿಎಂಸಿ ಮಾತ್ರ ನೀರು ಸಂಗ್ರಹವಿದೆ. 15 ದಿನಗಳ ಕಾಲ ಒಂದೂವರೆ ಟಿಎಂಸಿ ನೀರು ಕಾಲುವೆಗೆ ಬಿಡುಗಡೆ ಮಾಡಲು ಮಲಪ್ರಭಾ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದನ್ನೂ ಓದಿ: ಸಾಬೂನು ಕಾರ್ಖಾನೆಗೆ ತ್ವರಿತ ಗತಿಯಲ್ಲಿ ಕಾರ್ಪೊರೇಟ್ ರೂಪ: ಎಂ.ಬಿ ಪಾಟೀಲ್

ಬೆಳಗಾವಿ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದರು. ಇದಲ್ಲದೇ ಸವದತ್ತಿ, ಧಾರವಾಡ ಜಿಲ್ಲೆಯಲ್ಲಿ ನೀರು ಬಿಡುವಂತೆ ರೈತರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಶುಕ್ರವಾರದಿಂದ ಐದು ದಿನಗಳ ಕಾಲ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದನ್ನೂ ಓದಿ: ಎನ್‌ಡಿಎ ಕೂಟ ಸೇರಿದ ಜೆಡಿಎಸ್‌ – ದೋಸ್ತಿ ಲೆಕ್ಕಾಚಾರ ಏನು? ಸೀಟ್ ಹಂಚಿಕೆ ಸೂತ್ರ ಏನು?

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article