ಕ್ಯಾನ್‍ಬೆರ್ರಾ: ಶೌಚಾಲಯದಲ್ಲಿ ನೀರು ಹೆಬ್ಬಾವು ಕಾಣಿಸಿಕೊಂಡಿದ್ದರಿಂದ ಮಹಿಳೆಯೊಬ್ಬರು ಮನೆಯಿಂದ ಓಡಿ ಬಂದಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಶೌಚಾಲಯದಲ್ಲಿ ಕಾಣಿಸಿಕೊಂಡ ಹೆಬ್ಬಾವಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಘಟನೆ ನಿರ್ದಿಷ್ಟವಾಗಿ ಎಲ್ಲಿ ನಡೆದಿದೆ ಎಂಬುದರ ವಿವರಗಳು ಲಭ್ಯವಾಗಿಲ್ಲ. ಆದ್ರೆ ಮಹಿಳೆ ಶೌಚಾಲಯಕ್ಕೆ ತೆರಳಿದಾಗ ಟಾಯ್ಲೆಟ್ ಗೆ ನೀರಿನ ಸಂಪರ್ಕ ಕಲ್ಪಿಸಿರುವ ಪೈಪ್ ಮೇಲೆ ಕಂಡಿದೆ. ಹೆಬ್ಬಾವು ನೀರಿನ ಪೈಪ್ ಮತ್ತು ಸುತ್ತಲೂ ಓಡಾಡಿದೆ. ಗಾಬರಿಯಿಂದ ಕಿರುಚಿ ಮಹಿಳೆ ಶೌಚಾಯದಿಂದ ಹೊರ ಬಂದಿದ್ದಾರೆ.
Advertisement
Advertisement
ಹೊರ ಬರುತ್ತಿದ್ದಂತೆ ಮಹಿಳೆ ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಶೌಚಾಲಯದಲ್ಲಿದ್ದ ಹೆಬ್ಬಾವನ್ನು ಹಿಡಿದಿದ್ದಾರೆ. ಹೆಬ್ಬಾವು ಹಿಡಿದು ಶೌಚಾಲಯಕ್ಕೆ ತೆರಳಿದಾಗ ಎಚ್ಚರದಿಂದ ಇರಬೇಕು. ಒಳಚರಂಡಿಯ ಮೂಲಕ ಹಾವುಗಳು ಮನೆಯನ್ನು ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಟಾಯ್ಲೆಟ್ ತೇವಾಂಶದಿಂದ ಇರೋದ್ರಿಂದ ನೀರು ಹೆಬ್ಬಾವುಗಳು ಕಾಣಿಸುವುದು ಸಹಜ. ಆದ್ರೆ ಹಾವುಗಳು ಕಾಣಿಸಿಕೊಂಡಾಗ ಅವುಗಳನ್ನು ಕೊಲ್ಲದೇ ಉರಗ ತಜ್ಞರಿಗೆ ಮಾಹಿತಿ ನೀಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.
Advertisement
ಮಹಿಳೆ ಶೌಚಾಲಯದಲ್ಲಿ ಕಂಡಿದ್ದ ಹೆಬ್ಬಾವಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಟಾಯ್ಲೆಟ್ ಕೂರುವ ಮುನ್ನ ಎಚ್ಚರ ಅಂತಾ ಬರೆದುಕೊಂಡಿದ್ದಾರೆ. ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಫನ್ನಿ ಫನ್ನಿ ಕಮೆಂಟ್ ಮಾಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv