ಬೆಂಗಳೂರು: ಪ್ರತಿಯೊಬ್ಬರ ಜೀವಜಲ ಅಂದ್ರೇ ಅದು ಕಾವೇರಿ. ಕಾವೇರಿ ನೀರಿಗೆ ಕೊಳಚೆ ನೀರು ಮಿಕ್ಸ್ ಆದ ಘಟನೆ ಬೆಂಗಳೂರಲ್ಲಿ ನಡೆದಿದೆ.
Advertisement
ಹೌದು. ಬೆಂಗಳೂರಿನ ಭಾರತೀ ನಗರದ ಕಾಮರಾಜ್ ರೋಡ್‍ನಲ್ಲಿ ಕುಡಿಯುವ ಕಾವೇರಿ ನೀರಿಗೆ ಕೊಳಚೆ ನೀರು ಮಿಕ್ಸ್ ಆಗುತ್ತಿದೆ. ಇದಕ್ಕೆ ಕಾರಣ ಕಳೆದ ಮೂರು ವರ್ಷಗಳಿಂದ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರೋದು. ಪೈಪ್‍ಲೈನ್ ಸಮಸ್ಯೆಯಿಂದ ಕುಡಿಯುವ ನೀರಿನಲ್ಲಿ ಹಾಗೂ ವಾಶ್ ರೂಂನಲ್ಲಿ ಕೊಳಚೆ ನೀರು ಬರುತ್ತಿದೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಶಾಸಕರ ನಡುವೆ ಉತ್ತರ ದಕ್ಷಿಣ ವಾಕ್ಸಮರ
Advertisement
Advertisement
ಕಾಮರಾಜ ರಸ್ತೆಯ ನಿವಾಸಿಗಳು ಇಂತಹ ಕೊಳಚೆ ಕಪ್ಪು ಕಪ್ಪು ನೀರನ್ನು ಬಾಟಲಲ್ಲಿ ಸಂಗ್ರಹಿಸಿದ್ದಾರೆ. ಎಷ್ಟೇ ಬಾರಿ ದೂರು ನೀಡಿದರೂ ಜಲಮಂಡಳಿ ಎಚ್ಚೆತ್ತುಕೊಳ್ಳುತ್ತಿಲ್ಲ. ಸ್ಮಾರ್ಟ್ ಸಿಟಿಯಿಂದ 25.7 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಲೀಕೇಜ್ ಸಮಸ್ಯೆ ಪತ್ತೆ ಹಚ್ಚಲಾಗದೆ ಜಲಮಂಡಳಿ ಕಾಲಹರಣ ಮಾಡುತ್ತಿದೆ. ಪ್ರತೀ ಮನೆಯಲ್ಲಿ ಆನಾರೋಗ್ಯ ಸಮಸ್ಯೆಯಿಂದ ಸ್ಥಳೀಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದೆ ಜನಪ್ರತಿನಿಧಿಗಳು ಜನರ ಜೀವದ ಜೊತೆ ಚೆಲ್ಲಾಟವಾಡ್ತಿರೋದು ಸುಳ್ಳಲ್ಲ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಇದನ್ನೂ ಓದಿ: ವಿಧಾನಸಭೆಗೆ ರಾಗಿ ತಂದ ಶಾಸಕ: ಇಬ್ರಾಹಿಂ ನೋಡಿ ಕಿಚಾಯಿಸಿದ ಸಿದ್ದು