ಬೆಂಗಳೂರು: ಇನ್ನೇನು ಎಂಪಿ ಎಲೆಕ್ಷನ್ ಹವಾ ಶುರುವಾಗುತ್ತಿದೆ. ನಮ್ಮ ಜನಪ್ರತಿನಿಧಿಗಳು ಫೈನಲಿ ನಿದ್ದೆಯಿಂದ ಎದ್ದು ಮೈಕೊಡವಿಕೊಂಡು ಪ್ರಚಾರಕ್ಕೆ ರೆಡಿಯಾಗಿದ್ದಾರೆ. ಅದರಲ್ಲೂ ಮಹಿಳೆಯರನ್ನು ಸೆಳೆಯಲು ಭರ್ಜರಿ ವಾಟರ್ ಪಾಲಿಟಿಕ್ಸ್ ಶುರು ಮಾಡಿಕೊಂಡಿದ್ದಾರೆ.
ನೀರು ಬತ್ತಿಲ್ಲ ಎಂದು ಸಾವಿರ ಸಲ ಹಿಂದಿನ ಬೇಸಿಗೆ ಟೈಂನಲ್ಲಿ ಕರೆ ಮಾಡಿದರೂ ತಲೆ ಕೆಡಿಸಿಕೊಳ್ಳುತ್ತಿದ್ದ ಕಾರ್ಪೋರೇಟರ್ಸ್, ಎಂಎಲ್‍ಎ ಈ ಬಾರಿ ಮಾರ್ಚ್ ಆರಂಭದಲ್ಲಿಯೇ ಅಕ್ಕಾ ಮನೆಗೆ ನೀರು ಕರೆಕ್ಟ್ ಟೈಂಗೆ ಬರುತ್ತಾ ಇದ್ಯಾ ಅಂತಾ ಈಗ ಬಾಗಿಲು ತಟುತ್ತಿದ್ದಾರೆ. ಇರೋ ಬರೋ ರಸ್ತೆನೆಲ್ಲ ಅಗೆದು ಉದ್ದುದ್ದ ಪೈಪ್ ಹಾಕಿ ಅಕ್ಕ ಬೇಸಿಗೆ ಎಂಡ್ ವರೆಗೆ ನೀರಿಗೆ ಕಷ್ಟ ಪಡಬೇಡಿ ನಾವಿದ್ದೀವಿ ಅಂತಾ ನಗುಮೊಗದಿಂದ ಭರವಸೆ ನೀಡುತ್ತಿದ್ದಾರೆ. ಬೆಂಗಳೂರಿನ ಯಾವ ರಸ್ತೆಗೇ ಬೇಕಾದರೂ ಹೋದರು ವಾಟರ್ ಪೈಪ್‍ಲೈನ್ ಕಾಮಗಾರಿಯದ್ದೇ ಕಾರುಬಾರು ಕಾಣುತ್ತದೆ.
Advertisement
Advertisement
ಮತ ಬೇಟೆಯ ಬೆನ್ನಲ್ಲೆ ಏರಿಯಾದ ಮಹಿಳೆಯರನ್ನು ಒಲೈಸೋಕೆ ರಾಜಕೀಯ ಮುಖಂಡರು ತಮ್ಮ ಶಿಷ್ಯಂದಿರ ಮೂಲಕ ಸಜ್ಜಾಗಿದ್ದಾರೆ. ವಾಟರ್ ಪಾಲಿಟಿಕ್ಸ್ ಕೊಂಚ ಮಹಿಳೆಯರನ್ನು ಬೇಗ ಸೆಳೆಯುತ್ತೆ ಅನ್ನೋದು ಗೊತ್ತಿದೆ. ಇದಕ್ಕಾಗಿ ಇರೋ ಬರೋ ರಸ್ತೆನೆಲ್ಲ ಅಗೆದು ಕೆಲಸ ನಾವ್ ಮಾಡ್ತಾ ಇದ್ದೀವಿ ಅಂತಾ ತೋರಿಸಿಕೊಳ್ತಿದ್ದಾರೆ. ಕೆಲ ಮನೆಯವರ ಬೋರ್ ಕನೆಕ್ಷನ್ ನಿಂದಲೂ ಅಕ್ಕಪಕ್ಕದ ಮನೆಯವರಿಗೆಲ್ಲ ನೀರಿನ ಸಂಪರ್ಕ ಕಲ್ಪಿಸಿಕೊಡುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv