ನ್ಯೂಯಾರ್ಕ್ ನ ಬೀದಿಗಳಲ್ಲಿ ಬಾಲಿವುಡ್ ಹಾಡಿಗೆ ವ್ಯಕ್ತಿ ಡ್ಯಾನ್ಸ್: ವಿಡಿಯೋ ವೈರಲ್

Public TV
1 Min Read
bollywood dance

ನ್ಯೂಯಾರ್ಕ್: ವ್ಯಕ್ತಿಯೊಬ್ಬ ನ್ಯೂಯಾರ್ಕ್ ಬೀದಿಗಳಲ್ಲಿ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿ ಜನರನ್ನು ನಕ್ಕು ನಗಿಸಿದ್ದಾನೆ.

ವ್ಯಕ್ತಿ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ವ್ಯಕ್ತಿಯ ಡ್ಯಾನ್ಸ್ ನೋಡಿ ಬಾಲಿವುಡ್ ಮಂದಿಯೇ ಫಿದಾ ಆಗುವ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದಾನೆ.

ಈ ವ್ಯಕ್ತಿ ‘ಖಳ್‍ನಾಯಕ್’ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಡ್ಯಾನ್ಸ್ ಮಾಡಿದ ‘ಚೋಲಿ ಕೇ ಪೀಚೆ ಕ್ಯಾ ಹೇ’ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾನೆ. ಮಾಧುರಿ ನೃತ್ಯ ಮಾಡಿದ ರೀತಿಯಲ್ಲೇ ಡ್ಯಾನ್ಸ್ ಮಾಡಿ ಅಕ್ಕಪಕ್ಕದಲ್ಲಿದ್ದ ಜನರಿಗೆ ಮನರಂಜನೆ ನೀಡಿದ್ದಾನೆ.

bollywood dance 3

ಈ ವಿಡಿಯೋ ಸುಮಾರು 3.30 ನಿಮಿಷವಿದ್ದು, 5ಕ್ಕೂ ಹೆಚ್ಚು ಬಾಲಿವುಡ್ ಹಾಡಿಗೆ ಈ ವ್ಯಕ್ತಿ ಡ್ಯಾನ್ಸ್ ಮಾಡಿದ್ದಾನೆ. ಕಿವಿಯಲ್ಲಿ ಇಯರ್ ಫೋನ್ ಹಾಕಿ ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿದ ರೀತಿಯಲ್ಲೇ ಈ ವ್ಯಕ್ತಿ ಕೂಡ ಡ್ಯಾನ್ಸ್ ಮಾಡಿದ್ದು ವಿಶೇಷ.

ಪ್ರೇಮ್ ರತನ್ ಧನ್ ಪಾಯೋ, ಚೋಲಿ ಕೇ ಪೀಚೆ ಕ್ಯಾ ಹೇ, ಧೂಮ್, ಚಮಕ್ ಚಲೋ, ಬದ್ರಿನಾಥ್ ಕೇ ದುಲ್ಹಾನೀಯಾ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋ ಯೂಟ್ಯೂಬ್‍ನಲ್ಲಿ 6 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ. ಇನ್ನೂ ಫೇಸ್‍ಬುಕ್‍ನಲ್ಲಿ 3ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, 51 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

bollywood dance 2

Share This Article
Leave a Comment

Leave a Reply

Your email address will not be published. Required fields are marked *