ಗಾಂಧಿನಗರ: ಸಂಚಾರ ನಿಯಮ ಉಲ್ಲಂಘಿಸಿ ತಪ್ಪಿಸಿಕೊಳ್ಳುತ್ತಿದ್ದ ಸವಾರೆಯನ್ನು ಗುಜರಾತಿನ ಮಹಿಳಾ ಪೇದೆಯೊಬ್ಬರು ಓಡಿ ಹೋಗಿ, ಸ್ಕೂಟಿಯನ್ನು ಹಿಡಿದು ಮುಂದಕ್ಕೆ ಹೋಗದಂತೆ ತಡೆದ ವಿಡಿಯೋ ವೈರಲ್ ಆಗಿದೆ.
ರಾಜಕೋಟ್‍ನ ವೃತ್ತವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ವಿಡಿಯೋದಲ್ಲಿ ಏನಿದೆ?
ವೃತ್ತವೊಂದಲ್ಲಿ ಮಹಿಳೆಯೊಬ್ಬರು ಸಂಚಾರ ನಿಯಮ ಉಲ್ಲಂಘಿಸಿ ಸ್ಕೂಟಿ ಚಾಲನೆ ಮಾಡಿಕೊಂಡು ಬಂದಿದ್ದರು. ರಸ್ತೆ ಸಂಚಾರದಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಸಂಚಾರ ಪೇದೆಯೊಬ್ಬರು ಮಹಿಳೆಯನ್ನು ನಿಲ್ಲಿಸಿ ವಿಚಾರಿಸುತ್ತಿದ್ದರು. ಆದರೆ ಮಹಿಳೆ ಸ್ವಲ್ಪ ಸಮಯ ನಿಂತು, ಸ್ಕೂಟಿಯನ್ನು ವೇಗವಾಗಿ ಮುನ್ನುಗ್ಗಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾಳೆ.
Advertisement
ಸ್ಕೂಟಿ ಮುನ್ನುಗ್ಗುತ್ತಿದ್ದಂತೆ ವೇಗವಾಗಿ ಓಡಿದ ಮಹಿಳಾ ಪೇದೆ, ಹಿಂಬದಿಯಿಂದ ಸ್ಕೂಟಿಯನ್ನು ಗಟ್ಟಿಯಾಗಿ ಹಿಡಿದರು. ಆದರೆ ಪಟ್ಟುಬಿಡದ ಮಹಿಳೆ ಮತ್ತೇ ಸ್ಕೂಟಿ ವೇಗವನ್ನು ಹೆಚ್ಚಿಸಿ, ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿ ಸಿಕ್ಕಿಬಿದ್ದಿದ್ದಾಳೆ. ತಕ್ಷಣವೇ ಪೇದೆ ಸ್ಕೂಟಿ ಕೀಯನ್ನು ಕಿತ್ತುಕೊಂಡು ತಮ್ಮ ಬಳಿ ಇಟ್ಟುಕೊಂಡ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.