ನವದೆಹಲಿ: ಲೋಕಸಭಾ ಚುನಾವಣೆಯ (Loksabha Elections 2024) ಮೂರನೇ ಹಂತದ ಮತದಾನದ ಮುನ್ನಾದಿನ ಗುಜರಾತ್ ಅಹಮದಾಬಾದ್ ನಲ್ಲಿರುವ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ ಮಾಡಲಾಗಿದೆ. ಇತ್ತಿಚೇಗೆ ದೆಹಲಿಯಲ್ಲಿ ಬಂದ ಬೆದರಿಕೆ ರೀತಿಯಲ್ಲಿ ಹಲವಾರು ಶಾಲೆಗಳಿಗೆ ಏಕಕಾಲದಲ್ಲಿ ಬೆದರಿಕೆ ಹಾಕಲಾಗಿದೆ.
ಅಹಮದಾಬಾದ್ ನ ಭೋಪಾಲ್ ನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್, ಆನಂದ್ ನಿಕೇತನ್ ವಸ್ತ್ರಾಪುರದಲ್ಲಿರುವ ಏಷ್ಯಾ ಇಂಗ್ಲಿಷ್ ಸ್ಕೂಲ್, ಘಟ್ಲೋಡಿಯಾದಲ್ಲಿರುವ ಕ್ಯಾಲೋರೆಕ್ಸ್ ಶಾಲೆ, ಅಮೃತ ವಿದ್ಯಾಲಯ ಮತ್ತು ಚಂದಖೇಡದಲ್ಲಿರುವ ನ್ಯೂ ನೋಬಲ್ ಸ್ಕೂಲ್ ಮತ್ತು ಒಎನ್‌ಜಿಸಿ ಕೇಂದ್ರೀಯ ವಿದ್ಯಾಲಯಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.
Advertisement
Advertisement
ಇಮೇಲ್ ಸ್ವೀಕರಿಸಿದ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿವೆ. ಬೇಸಿಗೆ ರಜೆ ಹಿನ್ನೆಲೆ ಆತಂಕಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ. ಮಾಹಿತಿ ಪಡೆದ ಪೊಲೀಸ್ ತಂಡಗಳು ಬಾಂಬ್ ಸ್ಕ್ವಾಡ್‌ಗಳೊಂದಿಗೆ ಶಾಲೆಗಳಿಗೆ ಬಂದು ಪರಿಶೀಲನೆ ನಡೆಸಿದವು. ಪ್ರಾಥಮಿಕ ಮಾಹಿತಿ ಪ್ರಕಾರ, ಬೆದರಿಕೆ ಇ-ಮೇಲ್‌ಗಳು ಭಾರತದ ಹೊರಗಿನ ಡೊಮೇನ್‌ನಿಂದ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
Advertisement
ಬೆದರಿಕೆ ಬಂದ ಶಾಲೆಗಳನ್ನು ಪರಿಶೀಲಿಸಿದೆ, ಎಲ್ಲವೂ ಸುರಕ್ಷಿತ ಮತ್ತು ಸುಭದ್ರವಾಗಿದೆ. ನಮ್ಮ ಪೊಲೀಸರು, ಆಡಳಿತ ಮತ್ತು ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಗಾಬರಿಯಾಗುವಂತದ್ದು ಏನೂ ಇಲ್ಲ ಎಂದು ಬಾಂಬ್ ಸ್ಕ್ವಾಡ್ ಅಧಿಕಾರಿ ಬಿ. ಯಾದವ್ ಹೇಳಿದ್ದಾರೆ. ಕಳೆದ ವಾರ ದೆಹಲಿ-ಎನ್‌ಸಿಆರ್‌ನಾದ್ಯಂತ 150 ಕ್ಕೂ ಹೆಚ್ಚು ಶಾಲೆಗಳು ಮತ್ತು ಲಕ್ನೋದ ಒಂದು ಶಾಲೆಗಳಿಗೆ ರಷ್ಯಾದಿಂದ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು.