Connect with us

Cricket

ಮತ್ತೆ ಅಭಿಮಾನಿಗಳ ಮನಗೆದ್ದ ವಿರಾಟ್ ಕೊಹ್ಲಿ – ವೈರಲ್ ವಿಡಿಯೋ

Published

on

ಇಂದೋರ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ತಮ್ಮ ನೆಚ್ಚಿನ ಅಭಿಮಾನಿಯೊಂದಿಗೆ ಮಾತನಾಡಬೇಕು ಎಂದು ಅಭಿಮಾನಿಗಳು ಹುಚ್ಚು ಸಾಹಸಕ್ಕೆ ಕೈ ಹಾಕುತ್ತಾರೆ. ಇಂತಹದ್ದೇ ಘಟನೆ ಬಾಂಗ್ಲಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಇಂದೋರ್ ನಲ್ಲಿ ನಡೆದಿದೆ.

ಅಭಿಮಾನಿ ಏಕಾಏಕಿ ಕ್ರೀಡಾಂಗಣದಲ್ಲಿ ಹಾಕಿದ್ದ ಬೇಲಿಯನ್ನು ಹಾರಿ ಮೈದಾನಕ್ಕೆ ಪ್ರವೇಶ ಮಾಡಿದ್ದ. ಅಲ್ಲದೇ ನೇರ ಟೀಂ ಇಂಡಿಯಾ ಆಟಗಾರರು ನಿಂತಿದ್ದ ಸ್ಥಳಕ್ಕೆ ತೆರಳಿ ಕೊಹ್ಲಿ ಕಾಲಿಗೆ ನಮಸ್ಕರಿಸಿದ್ದ. ಕೂಡಲೇ ಕ್ರೀಡಾಂಗಣದ ಸಿಬ್ಬಂದಿ ಎಚ್ಚೆತ್ತು, ಅಭಿಮಾನಿಯನ್ನು ಹೊರ ಕರೆದುಕೊಂಡು ಹೋಗಲು ಮುಂದಾಗಿದ್ದರು, ಆದರೆ ಈ ವೇಳೆ ಸಿಬ್ಬಂದಿಯನ್ನು ತಡೆದ ಕೊಹ್ಲಿ ಅಭಿಮಾನಿಯೊಂದಿಗೆ ಮಾತನಾಡಿದ್ದರು. ಇದನ್ನು ಓದಿ: ನೀವು ಬಯಸಿದ್ದನ್ನು ಪಡೆದಿದ್ದೀರಿ: ಮೈದಾನದಲ್ಲೇ ಕೊಹ್ಲಿಗೆ ಮಯಾಂಕ್ ಸಂದೇಶ

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯ ಈ ವಿಡಿಯೋ ವೈರಲ್ ಆಗಿದ್ದು, ಸಿಬ್ಬಂದಿಗೆ ಅಭಿಮಾನಿಯನ್ನು ಏನು ಮಾಡದಂತೆ ಸೂಚನೆ ನೀಡಿದ್ದ ಕೊಹ್ಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಅಭಿಮಾನಿಯ ಈ ಹುಚ್ಚಾಟಕ್ಕೆ ರಕ್ಷಣಾ ಸಿಬ್ಬಂದಿ ಮಾತ್ರ ಅವಾಕ್ ಹಾಕಿದ್ದರು. ಈ ಹಿಂದೆ ಇಂತಹದ್ದೇ ಘಟನೆ ನಡೆದ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ರಕ್ಷಣಾ ಸಿಬ್ಬಂದಿಯ ವಿರುದ್ಧ ಕೆಂಡಾಮಂಡಲರಾಗಿದ್ದರು. ಪಂದ್ಯವನ್ನು ಉಚಿತವಾಗಿ ನೋಡಲು ರಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಿದಂತೆ ಕಾಣುತ್ತಿದೆ. ಭಾರತದಲ್ಲೇ ಇಂತಹ ಘಟನೆಗಳು ನಡೆಯುತ್ತದೆ ಎಂದು ಟೀಕೆ ಮಾಡಿದ್ದರು. ಇದನ್ನು ಓದಿ: ಬ್ಯಾಟ್ ಬೀಸಿ ನಾನು ಕೊಹ್ಲಿ ಎಂದ ಆಸಿಸ್ ಆಟಗಾರನ ಪುತ್ರಿ: ವಿಡಿಯೋ

https://twitter.com/TrollvkH/status/1195743087592538113

Click to comment

Leave a Reply

Your email address will not be published. Required fields are marked *