ನವದೆಹಲಿ: ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ವ್ಯಕ್ತಿ ಎನ್ನುವ ಖ್ಯಾತಿ ಪಡೆದಿರುವ ಉಸೇನ್ ಬೋಲ್ಟ್, ಈಗ ಅಂತರಿಕ್ಷದಲ್ಲಿಯೂ ಅತಿ ವೇಗವಾಗಿ ಓಡಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಆಗಿರುವ ಉಸೇನ್ ಬೋಲ್ಟ್, ಗುರುತ್ವಾಕರ್ಷನೆ ಇರದ ಏರ್ ಬಸ್ಸಿನಲ್ಲಿ ಓಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವಿಡಿಯೋದಲ್ಲಿ ಏನಿದೆ?
ಗುರುತ್ವಾಕರ್ಷನೆ ಇಲ್ಲದ ಬಸ್ಸಿನಲ್ಲಿ ತಮ್ಮೊಂದಿಗೆ ಇದ್ದ ಇಬ್ಬರು ಪ್ರಯಾಣಿಕರ ಜೊತೆಗೆ ಓಟದ ಸ್ಪರ್ಧೆಗೆ ಇಳಿಯುತ್ತಾರೆ. ಓಟ ಆರಂಭಸಿದ ಬೋಲ್ಟ್ ನೆಲಕ್ಕೆ ಕಾಲು ತಾಕಿಸಲು ಕಷ್ಟಪಡಬೇಕಾಯಿತು. ತಮ್ಮ ಎದುರಿಗೆ ಇರುವ ಗೋಡೆಯನ್ನು ಮುಟ್ಟುವ ಮೊದಲೇ ಬೋಲ್ಟ್ ಜಾರಿ ಕೆಳಗೆ ಬೀಳುತ್ತಾರೆ. ತಕ್ಷಣವೇ ಪಲ್ಟಿ ಹೊಡೆದು ಗೋಡೆಯನ್ನು ಮುಟ್ಟಿ ವಾಪಾಸ್ ಆಗುತ್ತಾರೆ. ಮರಳಿ ಗುರಿಯತ್ತ ಬರುವಾಗ ಸ್ಪರ್ಧಿಗಳು ಬಹುದೂರವೇ ಉಳಿದಿರುತ್ತಾರೆ. ಈ ಮೂಲಕ ಗುರುತ್ವಾಕರ್ಷನೆ ಇಲ್ಲದ ಪ್ರದೇಶದಲ್ಲಿಯೂ ಬೋಲ್ಟ್ ವೇಗವಾಗಿ ಓಡಬಲ್ಲರು ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಫ್ರೆಂಚ್ ಗಗನಯಾತ್ರಿ ಜೀನ್ ಫ್ರಾಂಕೋಯಿಸ್ ಮತ್ತು ನೊವ್‍ಸ್ಪೇಸ್ ಓಕ್ಟಾವ್ ಡೆ ಗೌಲೆ ಬೋಲ್ಟ್ ಜೊತೆಗೆ ಸ್ಪರ್ಧಿಸಿದವರು. ಆದರೆ ಬೋಲ್ಟ್ ಅವರನ್ನು ಹಿಂದಿಕ್ಕಲು ವಿಫಲರಾಗಿದ್ದಾರೆ. ವಿಜಯದ ನಗೆ ಬೀರುತ್ತಿದ್ದಂತೆ ಬೋಲ್ಟ್ ತಮ್ಮ ಶೈಲಿಯಲ್ಲಿಯೇ ಎದೆಯನ್ನು ತಟ್ಟಿಕೊಂಡು ಸಂಭ್ರಮಿಸಿದ್ದಾರೆ. ‘ನಾನು ಸ್ವಲ್ಪ ಹೊತ್ತು ನಿಶಕ್ತನಾಗಿಬಿಟ್ಟಿದ್ದೇ. ಓ ದೇವರೇ ಏನಾಯಿತು ನನಗೆ ಎನ್ನುವ ಭಾವನೆ ಮೂಡಿತ್ತು. ಇದು ನನಗೆ ಉತ್ಸಾಹ (ಕ್ರೇಜ್) ತಂದುಕೊಟ್ಟಿದೆ ಎಂದು ಬೋಲ್ಟ್ ಹೇಳಿದ್ದಾರೆ.
Running in Zero Gravity @GHMUMM. #DareWinCelebrate #NextVictory ???? pic.twitter.com/5P5CACcLOx
— Usain St. Leo Bolt (@usainbolt) September 12, 2018
ಫುಟ್‍ಬಾಲ್ ಆಟದತ್ತ ಹೆಜ್ಜೆ ಹಾಕಿರುವ ಬೋಲ್ಟ್, ರಿಲ್ಯಾಕ್ಸ್ ಮೂಡ್‍ಗಾಗಿ ಇಂತಹ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಗುರುತ್ವಾಕರ್ಷನೆ ಇಲ್ಲದ ಬಸ್ಸಿನಲ್ಲಿ ನಾಲ್ಕು ನಿಮಿಷಗಳ ಕಾಲ ಜೀಗಿಯುತ್ತ ಹಾಗೂ ಹಾಸ್ಯ ಮಾಡುತ್ತ ಸಹ ಪ್ರಯಾಣಿಕರನ್ನು ರಂಜಿಸಿದ್ದಾರೆ. ವೃತ್ತಿಪರ ಫುಟ್‍ಬಾಲ್ ಆಟಗಾರರಾಗುವ ಉದ್ದೇಶದಿಂದ ಆಸ್ಟ್ರೇಲಿಯಾದ ಮ್ಯಾರಿನೆರ್ ನಲ್ಲಿ ಬೋಲ್ಟ್ ತರಬೇತಿ ಪಡೆಯುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Changing the game @GHMUMM. Celebrating life by drinking @GHMUMM in Zero Gravity ???? #DareWinCelebrate #NextVictory pic.twitter.com/A3FNqAn16f
— Usain St. Leo Bolt (@usainbolt) September 12, 2018