ಫೀಲ್ಡರ್ ಕಡೆಗೆ ಬಾಲ್ ಎಸೆದು ಕೋಪ ಪ್ರದರ್ಶಿಸಿದ ಬೌಲರ್ : ವಿಡಿಯೋ ನೋಡಿ

Public TV
1 Min Read
pak psl

ದುಬೈ: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯೋಜಿಸಿರುವ ಸೂಪರ್ ಲೀಗ್ ಸರಣಿಯ ಪಂದ್ಯದ ವೇಳೆ ಖಾಲಿ ಕ್ರೀಡಾಂಗಣದ ಫೋಟೋ ವೈರಲ್ ಆದ ಬಳಿಕ, ಈ ಬಾರಿ ಆನ್ ಫೀಲ್ಡ್ ನಲ್ಲಿ ಬೌಲರ್ ಒಬ್ಬ ತನ್ನ ಸಹ ಆಟಗಾರನ ಮೇಲೆ ಕೋಪ ಪ್ರದರ್ಶಿಸಿದ ವಿಡಿಯೋ ವೈರಲ್ ಆಗಿದೆ.

ಲೀಗ್ ನಲ್ಲಿ ಬುಧವಾರ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಲಾಹೋರ್ ತಂಡಗಳ ನಡುವಿನ ಪಂದ್ಯದ ವೇಳೆ ಈ ವಿಶೇಷ ಘಟನೆ ನಡೆದಿದೆ.

ಗೆಲುವಿನ ಸನಿಹದಲ್ಲಿದ್ದ ಲಾಹೋರ್ ತಂಡದ ಬೌಲರ್ ಸೊಹೈಲ್ ಖಾನ್, ಬೌಂಡರಿಯ ಗೆರೆ ಬಳಿ ಇದ್ದ ಯಾಸಿರ್ ಷಾ ಗಮನ ಸೆಳೆಯಲು ಪ್ರಯತ್ನಿಸಿ ವಿಫಲರಾಗಿದ್ದರು. ಈ ವೇಳೆ ತಾಳ್ಮೆ ಕಳೆದುಕೊಂಡ ಸೊಹೈಲ್, ಯಾಸಿರ್ ಕಡೆಗೆ ಬಾಲ್ ಎಸೆದಿದ್ದಾರೆ.

ಅದೃಷ್ಟವಶಾತ್ ಸೊಹೈಲ್ ಎಸೆದ ಬಾಲ್ ಯಾಸಿರ್ ತಲೆಗೆ ಬೀಳದೇ ಪಕ್ಕದಲ್ಲಿ ಬಿದ್ದಿದೆ. ಇದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ. ಬಳಿಕ ಯಾಸಿರ್ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಚೆಂಡನ್ನು ಬೌಲರ್ ಕಡೆ ಎಸೆದಿದ್ದಾರೆ.

ಈ ವೇಳೆ ಕ್ರೀಡಾಂಗಣದಲ್ಲಿದ್ದ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಇಬ್ಬರು ಆಟಗಾರರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದರು. ಕೊನೆಗೆ ಲಾಹೋರ್ ತಂಡ 17 ರನ್ ಗೆಲುವು ಪಡೆಯಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವಿನ ಸನ್ನಿವೇಶದ ವಿಡಿಯೋ ಹೆಚ್ಚು ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ತಿಳಿಸಿ ಮರು ಟ್ವೀಟ್ ಮಾಡುತ್ತಿದ್ದಾರೆ.

ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಲೀಗ್ ನಲ್ಲಿ ಆಡುತ್ತಿರುವ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ ಸನ್ ಈ ಘಟನೆಯನ್ನು ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ತಮಾಷೆಯ ಸನ್ನಿವೇಶ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

https://twitter.com/KP24/status/974031507919720449

Share This Article
Leave a Comment

Leave a Reply

Your email address will not be published. Required fields are marked *