ಮುಂಬೈ: ಎಟಿಎಂನಿಂದ ಹಣ ಬರುವುದು ಗೊತ್ತೆ ಇದೆ. ಆದರೆ ಮಹಾರಾಷ್ಟ್ರದ ಒಂದು ಕಡೆ ಕಾರ್ಡ್ ಹಾಕಿದರೆ ಮೋದಕ ಬರುತ್ತದೆ.
ಹೌದು, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯ ಸಹಕಾರ ನಗರದಲ್ಲಿ ಎಟಿಎಂ (ಎನಿ ಟೈಮ್ ಮೋದಕ) ಯತ್ರವನ್ನು ಸಿದ್ಧ ಪಡಿಸಲಾಗಿದೆ. ಎಟಿಎಂನಿಂದ ಮೋದಕ ಹೊರ ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.
Advertisement
ಸಹಕಾರ ನಗರದ ನಿವಾಸಿ ಸಂಜೀವ್ ಕುಲಕರ್ಣಿ ಎಂಬವರು ಈ ಎಟಿಎಂ ಯಂತ್ರವನ್ನು ಅಭಿವೃದ್ಧಿಪಡಿಸಿ, ಅದರೊಳಗೆ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಭಕ್ತರು ಗಣೇಶನ ಆಶೀರ್ವಾದ ಪಡೆದು, ಬಳಿಕ ವಿಶೇಷ ಕಾರ್ಡ್ ಹಾಕಿದರೆ ಮೋದಕ ಬರುವಂತೆ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ಕಾರ್ಡ್ ಹಾಕಿದ ಬಳಿಕ ಪುಟ್ಟ ಡಬ್ಬಿ ಹೊರ ಬರುತ್ತದೆ. ಅದರೊಳಗೆ ಮೋದಕವಿದ್ದು, ಮುಚ್ಚಳದ ಮೇಲೆ ಓಂ ಎಂದು ಬರೆಯಲಾಗಿರುತ್ತದೆ.
Advertisement
Advertisement
ಸಾಮಾನ್ಯ ಎಟಿಎಂ ನಂತೆಯೇ ಅದನ್ನು ಸಿದ್ಧಪಡಿಸಲಾಗಿದ್ದು, ಬಟನ್‍ಗಳ ಮೇಲೆ ಸಂಖ್ಯೆ ಹಾಗೂ ಸೂಚನೆ ಬದಲಾಗಿ, ಕ್ಷಮೆ, ಭಕ್ತಿ, ಪ್ರೀತಿ, ಶಾಂತಿ, ಜ್ಞಾನ ಮತ್ತು ದಾನ ಎಂದು ಬರೆಯಲಾಗಿದೆ.
Advertisement
ತಂತ್ರಜ್ಞಾನ ಮತ್ತು ಸಂಸ್ಕೃತಿಯನ್ನು ಒಟ್ಟಿಗೆ ಕೂಡಿಸಿಕೊಂಡು ಮುಂದುವರಿಯುವ ಸಂಕೇತವಾಗಿ ಈ ಎಟಿಎಂ ಸಿದ್ಧಪಡಿಸಲಾಗಿದೆ. ಇದಕ್ಕಾಗಿಯೇ ತಯಾರಿಸಿದ ವಿಶೇಷ ಕಾರ್ಡ್ ತೋರಿಸಿದರೆ ಪ್ರಸಾದದ ರೂಪದಲ್ಲಿ ಮೋದಕ ಪಡೆಯಬಹುದು ಎಂದು ಯಂತ್ರವನ್ನು ಅಭಿವೃದ್ಧಿ ಪಡಿಸಿದ ಸಂಜೀವ್ ಕುಲಕರ್ಣಿ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
#WATCH: An ATM (Any Time Modak) Ganesha has been installed in Sahakar Nagar, Pune for #GaneshChaturthi celebrations. #Maharashtra pic.twitter.com/GA2TVOgZKw
— ANI (@ANI) September 17, 2018