ಮಾಸ್ಕೋ: ಗಗನ ಚುಂಬಿ ಕಟ್ಟಡದ ಮೇಲೆ ನಿಂತು ಫೋಟೋ ಶೂಟ್, ಎತ್ತರ ಹಾಗೂ ಉದ್ದವಾದ ಗೋಡೆಯ ಮೇಲೆ ಸೈಕಲ್ ಸವಾರಿ ಮಾಡಿರುವುದನ್ನು ಕೂಡ ನೋಡಿರ್ತಿರಿ. ಅಂತೆಯೇ ಇದೀಗ ರಷ್ಯಾದ ವ್ಯಕ್ತಿಯೊಬ್ಬ ಎತ್ತರದ ಕಟ್ಟಡದ ಮೇಲೆ ನಿಂತು ಬಾಸ್ಕೆಟ್ ಬಾಲ್ ಆಡೋದನ್ನು ನೋಡಿದ್ರೆ ನೀವೂ ಬೆಚ್ಚಿ ಬೀಳ್ತೀರಾ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು. ರಷ್ಯಾದ ಥ್ರಿಲ್ ಸೀಕರ್ ಎಂಬ ವ್ಯಕ್ತಿಯೇ ಈ ಸಾಹಸ ಮಾಡಿದಾತ. ಈತ ಹಾಂಕಾಂಗ್‍ನಲ್ಲಿರೋ ಗಗನ ಚುಂಬಿ ಕಟ್ಟಡವೊಂದರ ಮೂಲೆಯಲ್ಲಿ ನಿಂತು ಹೋವರ್ ಬೋರ್ಡ್ ಮೂಲಕ ನಡೆಯುತ್ತಾನೆ. ಅಲ್ಲದೇ ಯಾವುದೇ ರಕ್ಷಣಾ ಸಲಕರಣೆಗಳಿಲ್ಲದೇ ಬಾಸ್ಕೆಟ್ ಬಾಲ್ ಆಡುವ ಮೂಲಕ ವೀಕ್ಷಕರ ಹುಬ್ಬೇರಿಸಿದ್ದಾನೆ.
ಈ ವಿಡಿಯೋವನ್ನು ಒಲೆಗ್ಕ್ರಿಕೆಟ್ ಅನ್ನೋ ವ್ಯಕ್ತಿ ತನ್ನ ಇನ್ ಸ್ಟ್ರಾಗ್ರಾಂನಲ್ಲಿ ಜೂನ್ 1 ರಂದು ಪೋಸ್ಟ್ ಮಾಡಿದ್ದಾನೆ. ವಿಡಿಯೋದಲ್ಲಿ ರಷ್ಯಾದ ವ್ಯಕ್ತಿ ಕಟ್ಟಡದ ಮೇಲೆ ಯಾವುದೇ ಭಯವಿಲ್ಲದೇ ನಡಿಯೋ ವೇಳೆ ಸೆಲ್ಫಿ ಸ್ಟಿಕ್ ಮೂಲಕ ಮೊಬೈಲ್ ನಲ್ಲಿ ತನ್ನ ಸಾಹಸವನ್ನು ಸೆರೆಹಿಡಿದಿದ್ದಾನೆ.
ಸದ್ಯ ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ 4.6 ಲಕ್ಷ ವ್ಯೂ ಕಂಡರೆ, ಯೂಟ್ಯೂಬ್ ನಲ್ಲಿ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಕೆಲವರು ಈ ವಿಡಿಯೋ ನೋಡಿ ಭಯಗೊಂಡು ದಯವಿಟ್ಟು ಇಂತಹ ಸ್ಟುಪಿಡ್ ಸಾಹಸಗಳನ್ನು ಮಾಡಬೇಡಿ. ಯಾಕಂದ್ರೆ ಇಂತಹ ವಿಡಿಯೋಗಳಿಂದ ಪ್ರೇರೇಪಿತರಾಗಿ ತಾವೂ ಅಂತಹ ಸಾಹಸ ಮಾಡಲು ಹೋಗಿ ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಇಂತಹ ಕೆಲಸಗಳನ್ನು ಮಾಡಬೇಡಿ ಅಂತಾ ಕೆಲವರು ಕಮೆಂಟ್ ಮಾಡಿ ಕಿಡಿಕಾರಿದ್ದಾರೆ.
https://youtu.be/n-zcaXM-cg0