ಬೆಂಗಳೂರು: ರಾತ್ರಿ ರಾಣಿ ಎಂದೇ ಪ್ರಸಿದ್ಧವಾಗಿರುವ ಬ್ರಹ್ಮ ಕಮಲ ಪುಷ್ಪ ಹಂತ ಹಂತವಾಗಿ ಅರಳಿದ ಅಪರೂಪದ ದೃಶ್ಯ ಸೆರೆಯಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹೊಸಪಾಳ್ಯ ಗ್ರಾಮದ ನಿವಾಸಿ ರೈತ ಹನುಮಂತಯ್ಯ ಅವರ ತೋಟದಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಬರೋಬ್ಬರಿ 15 ಪುಷ್ಪಗಳು ಅರಳಿದ್ದು, ಹಂತಹಂತವಾಗಿ ಅರಳುವ ಬ್ರಹ್ಮಕಮಲವನ್ನು ವೀಕ್ಷಿಸಿದ ಗ್ರಾಮಸ್ಥರು ಸಂತಸದೊಂದಿಗೆ ಅಚ್ಚರಿಪಟ್ಟಿದ್ದಾರೆ.
Advertisement
Advertisement
ಈ ಅಪರೂಪದ ಮನಮೋಹಕ ಬ್ರಹ್ಮಕಮಲದ ಸೊಬಗನ್ನು, ತೋಟದ ಮಾಲೀಕರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ವಿಡಿಯೋದಲ್ಲಿ ಹೂ ಮೊದಲು ಮುಗ್ಗಾಗಿತ್ತು. ಬಳಿಕ ನಿಧಾನವಾಗಿ ಅರಳಿಕೊಂಡು ಬಂದಿದೆ. ಈ ಬ್ರಹ್ಮ ಕಮಲ ಪುಷ್ಪ ರಾತ್ರಿ ವೇಳೆ ಮಾತ್ರ ಅರಳುತ್ತದೆ.
Advertisement
ತಮ್ಮ ತೋಟದಲ್ಲಿ ಸುಮಾರು 15 ಹೂಗಳು ಅರಳಿದೆ. ಬ್ರಹ್ಮ ಕಮಲ ಪುಷ್ಪ ಅರಳಿದನ್ನು ನಮ್ಮ ಸ್ನೇಹಿತರೆಲ್ಲ ಬಂದು ನೋಡಿಕೊಂಡು ಹೋಗಿದ್ದಾರೆ. ನನಗೂ ತುಂಬಾ ಸಂತಸವಾಗಿದೆ ಎಂದು ಹನಮಂತಯ್ಯ ಅವರ ಮೊಮ್ಮಗಳು ದಿವ್ಯಾ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾಳೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews