ಇಸ್ಲಾಮಾಬಾದ್: 2023ರ ಏಕದಿನ ಏಷ್ಯಾಕಪ್ (Asia Cup 2023) ಹಾಗೂ ವಿಶ್ವಕಪ್ (WorldCup) ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತನ್ನ ತಂಡಕ್ಕೆ ಹೊಸ ಜೆರ್ಸಿಯನ್ನ ಅನಾವರಣಗೊಳಿಸಿದೆ.
View this post on Instagram
Advertisement
ಈ ಕುರಿತ ವಿಶೇಷ ವೀಡಿಯೋ ತುಣುಕನ್ನು ಪಿಸಿಬಿ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೀಡಿಯೋ ಕೊನೆಯಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಜಮ್, ಶಾದಾಬ್ ಖಾನ್ ಹಾಗೂ ಜಸೀಮ್ ಶಾ, ಮಹಿಳಾ ಕ್ರಿಕೆಟ್ ತಂಡದ ನಿದಾ ಧಾರ್, ಅಲಿಯಾ ರಿಯಾಜ್ ಹೊಸ ಜೆರ್ಸಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಹಸಿರು ಸ್ಟಾರ್‌ಗಳನ್ನು ಹೊಂದಿರುವ ಈ ಉಡುಪು ಆಟಗಾರರಿಗೆ ಮಾಸ್ ಲುಕ್ ನೀಡುತ್ತಿದೆ. ಇದನ್ನೂ ಓದಿ: India VS Pakistan: ಎರಡೂ ದೇಶಗಳು ಯುರೋಪಿಯನ್ ದೇಶಗಳ ಮಟ್ಟಕ್ಕೆ ಬೆಳೆದಿರೋದು ಸಂತೋಷ ತಂದಿದೆ: ನೀರಜ್ ಚೋಪ್ರಾ
Advertisement
Advertisement
ಏಷ್ಯಾಕಪ್ ಹಾಗೂ ವಿಶ್ವಕಪ್ ಟೂರ್ನಿಗೂ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ತಂಡವು ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ 118 ಶ್ರೇಯಾಂಕ (2,725 ಅಂಕ) ಗಳಿಸುವ ಮೂಲಕ ನಂ.1 ಸ್ಥಾನಕ್ಕೇರಿದೆ. 118 ಶ್ರೇಯಾಂಕ (2,714 ಅಂಕ) ಗಳಿಸಿರುವ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, 113 ಶ್ರೇಯಾಂಕ (4,081 ಅಂಕ) ಹೊಂದಿರುವ ಟೀಂ ಇಂಡಿಯಾ 3ನೇ ಸ್ಥಾನದಲ್ಲಿದೆ.
Advertisement
ಇತ್ತೀಚೆಗೆ ಅಫ್ಘಾನಿಸ್ತಾನದ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ನಾಯಕ ಬಾಬರ್ ಆಜಂ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಪಾಕಿಸ್ತಾನ ತಂಡ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿತ್ತು. ಈ ಮೂಲಕ ನಂ.1 ಸ್ಥಾನದಲ್ಲಿದ್ದ ಆಸ್ಟ್ರೇಲಿಯಾವನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು. ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ
ಆಗಸ್ಟ್ 30 ರಿಂದ ಸೆಪ್ಟೆಂಬರ್ 17ರ ವರೆಗೆ ಏಕದಿನ ಏಷ್ಯಾಕಪ್ ಟೂರ್ನಿ ನಡೆಯಲಿದ್ದು, ಪಾಕಿಸ್ತಾನದ ಮುಲ್ತಾನ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಮತ್ತು ನೇಪಾಳ ನಡುವೆ ಆರಂಭಿಕ ಪಂದ್ಯ ನಡೆಯಲಿದೆ. ಸೆಪ್ಟೆಂಬರ್ 2 ರಂದು ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣಸಲಿದೆ.
Web Stories