ದಿಸ್ಪುರ್: ಕೆಲ ದಿನಗಳ ಹಿಂದೆ ಅಸ್ಸಾಂ ವಿಧಾನಸಭಾ ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಕೃಪಾನಾಥ ಮಲ್ಲಾ ಆನೆ ಮೇಲಿಂದ ನೆಲಕ್ಕುರುಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿರುವ ಸ್ವಕ್ಷೇತ್ರ ರತಬರಿಯಲ್ಲಿನ ಅಭಿಮಾನಿಗಳು ಭಾನುವಾರ ನೂತನವಾಗಿ ವಿಧಾನಸಭಾ ಉಪಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಕೃಪಾನಾಥರನ್ನು ಆನೆ ಮೇಲೆ ಕುಳ್ಳಿರಿಸಿ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
Advertisement
#WATCH: Newly-elected deputy speaker of Assam assembly Kripanath Mallah falls off an elephant. He was being welcomed by his supporters in
Ratabari, his own constituency, in Karimganj district. The deputy speaker was unhurt in the incident. (06.10.2018) #Assam pic.twitter.com/2UYHkS7zvx
— ANI (@ANI) October 8, 2018
Advertisement
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಪಾನಾಥ್ ಕೈಯಲ್ಲಿ ಬಿಜೆಪಿಯ ಬಾವುಟ ಹಿಡಿದು ಮಾವುತನ ಜೊತೆ ಆನೆ ಮೇಲೆ ಕುಳಿತಿದ್ದರು. ಈ ವೇಳೆ ಆನೆಗೆ ಅದೇನಾಯಿತೊ ಗೊತ್ತಿಲ್ಲ. ಏಕಾಏಕಿ ಮೈ ಕೊಡವಿ, ಓಡಿದ್ದರಿಂದ ಕೃಪಾನಾಥ್ ಸೇರಿದಂತೆ ಇಬ್ಬರೂ ಆನೆ ಮೇಲಿಂದ ಬಿದ್ದಿದ್ದಾರೆ. ರಸ್ತೆ ಬದಿಯ ಹುಲ್ಲಿನ ಮೇಲೆ ಬಿದ್ದಿದ್ದರಿಂದ ಯಾರಿಗೂ ಯಾವುದೇ ಅನಾಹುತಗಳು ಆಗಿಲ್ಲ. ಕೂಡಲೇ ಕಾರ್ಯಕರ್ತರು ಕೃಪಾನಾತ್‍ರನ್ನು ರಕ್ಷಿಸಿದ್ದಾರೆ.
Advertisement
ಬಿಜೆಪಿ ಶಾಸಕ ಆನೆ ಮೇಲಿಂದ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv