ಕ್ಯಾಲಿಫೋರ್ನಿಯಾ: ತನ್ನ ಪ್ರಾಣವನ್ನು ಲೆಕ್ಕಿಸದೇ ವ್ಯಕ್ತಿಯೊಬ್ಬ ಧಗಧಗನೆ ಉರಿಯುತ್ತಿದ್ದ ಕಾಳ್ಗಿಚ್ಚಿನಿಂದ ಮೊಲವನ್ನು ರಕ್ಷಿಸಿದ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡಿರೋ ಕಾಳ್ಗಿಚ್ಚಿನಿಂದಾಗಿ ಮೊಲವೊಂದು ದಾರಿ ತಪ್ಪಿದ್ದು, ಬೆಂಕಿಯ ಕಡೆಗೆ ಓಡಿ ಹೋಗುತ್ತಿತ್ತು. ಆಗ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ ಮೊಲವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ನ್ಯಾಷನಲ್ ಜಿಯೋಗ್ರಫಿ ಟ್ವಿಟ್ಟರ್ ಖಾತೆಯಲ್ಲಿ ಗುರುವಾರದಂದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ 35 ಸೆಕೆಂಡ್ ವಿಡಿಯೋದಲ್ಲಿ ವ್ಯಕ್ತಿ ಆ ಚಿಕ್ಕ ಪ್ರಾಣಿಯನ್ನು ಹೇಗೆ ಉಳಿಸಿಕೊಳ್ಳುತ್ತಾರೆ ಎಂಬುದು ಸೆರೆಯಾಗಿದೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ಸುಮಾರು 6,000 ಬಾರಿ ರೀಟ್ವೀಟ್ ಆಗಿದ್ದು, 13,000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ 4 ದಿನಗಳಿಂದ ಕಾಳ್ಗಿಚ್ಚು ಆವರಿಸಿದೆ. ಈ ಬೆಂಕಿಯಿಂದ ನೂರಾರು ಮನೆಗಳಿಗೆ ಹಾನಿಯಾಗಿದೆ. ಅಷ್ಟೇ ಅಲ್ಲದೇ ಲಾಸ್-ಏಂಜಲೀಸ್ ನಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. 2 ಲಕ್ಷಗಿಂತ ಹೆಚ್ಚು ನಿವಾಸಿಗಳನ್ನ ಸ್ಥಳಾಂತರಿಸಲಾಗಿದೆ.
This man jumped into action when he noticed a small rabbit near the fast-spreading flames pic.twitter.com/9lKPbMKE3P
— National Geographic (@NatGeo) December 7, 2017