ವಿಡಿಯೋ: ಮಹಿಳೆಯ ಕಣ್ಣಿನಿಂದ 70 ಮಿ.ಮೀ ಉದ್ದದ ಹುಳು ಹೊರತೆಗೆದ ವೈದ್ಯರು

Public TV
1 Min Read
eye surgery 1 1

ತಿರುವನಂತಪುರಂ: ಮಹಿಳೆಯೊಬ್ಬರ ಕಿವಿಯಿಂದ ಜೇಡರ ಹುಳು ಹೊರಬಂದ ವಿಡಿಯೋವನ್ನ ನೋಡಿದ್ರಿ. ಈಗ ಕೇರಳದ ಎರ್ನಾಕುಲಂ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಕಣ್ಣಿನಿಂದ ಸುಮಾರು 70 ಮಿ.ಮೀ ಉದ್ದದ ಹುಳುವನ್ನ ವೈದ್ಯರು ಹೊರತೆಗೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

56 ವರ್ಷದ ಲಲಿತಾ ಎಂಬವರು ಕಣ್ಣಿನ ಒಳಗೆ ಹಾಗೂ ಕಣ್ಣಿನ ಸುತ್ತಲೂ ನವೆಯಾಗುತ್ತಿದೆ ಅಂತ ವೈದ್ಯರ ಬಳಿ ಹೋಗಿದ್ದರು. ವೈದ್ಯರು ಲಲಿತಾ ಅವರ ಕಣ್ಣನ್ನ ಪರೀಕ್ಷಿಸಿ, ನಂತರ ಶಸ್ತ್ರಚಿಕಿತ್ಸೆ ಮಾಡಿ ಕಣ್ಣಿನಲ್ಲಿದ್ದ ಡಿರೋಫಿಲಾರಿಯಾ ಜಾತಿಗೆ ಸೇರಿದ 70 ಮಿ.ಮೀ ಉದ್ದದ ಹುಳುವನ್ನ ಹೊರತೆಗೆದಿದ್ದಾರೆ. ಈ ಹುಳು ಆನೆಕಾಲು ರೋಗ ಉಂಟುಮಾಡುತ್ತದೆ ಎನ್ನಲಾಗಿದೆ.

eye surgery

ಲಲಿತಾ ಅವರಿಗೆ ಲೋಕಲ್ ಅನಸ್ತೇಶಿಯಾ ನೀಡಿ 10 ನಿಮಿಷಗಳ ಸರ್ಜರಿ ಮೂಲಕ ಹುಳುವನ್ನ ಹೊರತೆಗೆಯಲಾಗಿದೆ. ಸರ್ಜರಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದ್ದು, ನೋಡುಗರ ಮೈ ಜುಮ್ಮೆನಿಸುವಂತಿದೆ.

ಇದನ್ನೂ ಓದಿ: ತಲೆನೋವೆಂದು ಬೆಂಗಳೂರಿನ ಆಸ್ಪತ್ರೆಗೆ ಹೋದಾಗ ಕಿವಿಯಿಂದ ಹೊರಬಂತು ಜೇಡ!- ವಿಡಿಯೋ ವೈರಲ್

Share This Article