ಹೈದರಾಬಾದ್: ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಚಾಲಕನೊಬ್ಬ ಅವರ ಮೇಲೆಯೇ ಕಾರು ಹರಿಸಿದ ಆಘಾತಕಾರಿ ಘಟನೆಯೊಂದು ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಆಂದ್ರಪ್ರದೇಶ ರಾಜ್ಯದ ಕಾಕಿನಾಡ ಎಂಬಲ್ಲಿ ನಡೆದಿದ್ದು, ಈ ಘಟನೆಯ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಘಟನೆ ವಿವರ: ಭಾನುವಾರ ಬೆಳಗ್ಗೆ ರಸ್ತೆಗೆ ಬ್ಯಾರಿಕೇಡ್ ಇಟ್ಟು ಟ್ರಾಫಿಕ್ ಪೊಲೀಸರು ನಗರದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಮಾರುತಿ ಸೆಲೆರಿಯೋ ಕಾರೊಂದು ಬಂದಿದೆ. ಕುಡಿದ ಮತ್ತಿನಲ್ಲಿದ್ದ ಚಾಲಕನಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗಗಳಿರಲಿಲ್ಲ. ಹೀಗಾಗಿ ಕಾರ್ ನಿಲ್ಲಿಸದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ನಾಲ್ವರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರಿನ ಮುಂದೆ ನಿಂತರು, ಅವರಲ್ಲೊಬ್ಬರು ಕೂಡಲೇ ಬ್ಯಾರಿಕೇಡನ್ನು ಕಾರಿಗೆ ಅಡ್ಡಲಾಗಿರಿಸಿದ್ರು. ಆದ್ರೆ ಚಾಲಕ ಮಾತ್ರ ಅದ್ಯಾವುದನ್ನೂ ಕ್ಯಾರೇ ಎನ್ನದೇ ಏಕಾಏಕಿ ಅಮಾನವೀಯವಾಗಿ ಕಾರು ಚಲಾಯಿಸಿಯೇ ಬಿಟ್ಟಿದ್ದಾನೆ. ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಘಟನೆಯಿಂದಾಗಿ ಓರ್ವ ಪೊಲೀಸ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
#WATCH: Youth stopped for checking by policemen at a checkpoint in Kakinada, tried to escape after running over them, allegedly in an inebriated condition. Accused arrested. Two policemen injured #AndhraPradesh (25.03.18) pic.twitter.com/AnrB75lZsP
— ANI (@ANI) March 27, 2018