– ‘ಚಮ್ಮಕ್ ಚಲ್ಲೋ’ ಕಂಡು ಅಂಗಡಿಯತ್ತ ಮುಗಿಬಿದ್ದ ಗ್ರಾಹಕರು
ಚೆನ್ನೈ: ಗ್ರಾಹಕರನ್ನ ಅಂಗಡಿಗೆ ಸೆಳೆಯಲು ವ್ಯಾಪಾರಿಗಳು (Shopkeeper) ಹೊಸ ಹೊಸ ಮಾರ್ಕೆಟಿಂಗ್ (Marketing) ತಂತ್ರಗಳನ್ನು ಬಳಸುವುದು ಸಾಮಾನ್ಯ. ಆದ್ರೆ ಚೆನ್ನೈನಲ್ಲಿ ತರಕಾರಿ ವ್ಯಾಪಾರಿಯೊಬ್ಬರು ಮಾಡಿದ ‘ಔಟ್ ಆಫ್ ದಿ ಬಾಕ್ಸ್’ ಪ್ರಯತ್ನ ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಸದ್ದು ಮಾಡುತ್ತಿದೆ.

ಹೌದು. ಆಲೂಗಡ್ಡೆ, ಈರುಳ್ಳಿ ಸೇರಿದಂತೆ ತರಕಾರಿ ಮಾರಾಟ ಮಾಡುವ ವ್ಯಾಪಾರಿ, ಗ್ರಾಹಕರ ಗಮನ ಸೆಳೆಯಲು ಓರ್ವ ಮಹಿಳಾ ಡ್ಯಾನ್ಸರನ್ನ (Women Dancer) ನೇಮಿಸಿಕೊಂಡಿದ್ದಾರೆ. ಅಂಗಡಿ ಮುಂದೆ ಡ್ಯಾನ್ಸ್ ಮಾಡುತ್ತಾ ಜನರನ್ನ ಸೆಳೆಯುವ ಈ ವಿಶಿಷ್ಟ ಮಾರ್ಕೆಟಿಂಗ್ ತಂತ್ರ ಕಂಡು ಸುತ್ತಮುತ್ತಲಿನ ಜನರು ಈ ಅಂಗಡಿಯತ್ತ ಮುಖ ಮಾಡಿದ್ದಾರೆ.
View this post on Instagram
ಅಂಗಡಿಯ ಮುಂದೆ ‘ಚಮ್ಮಕ್ ಚಲ್ಲೋ’!
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸುಮಾರು 30 ಸೆಕೆಂಡ್‌ಗಳ ವಿಡಿಯೋದಲ್ಲಿ ಮಹಿಳೆಯೊಬ್ಬಳು ತರಕಾರಿ ಅಂಗಡಿಯ ಒಳಗೆ ಹಾಗೂ ಹೊರಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಬಾಲಿವುಡ್‌ನ ಜನಪ್ರಿಯ ಸಿನಿಮಾ ʻRa.Oneʼನ ಹಿಟ್ ಸಾಂಗ್ ʻಚಮ್ಮಕ್ ಚಲ್ಲೋ’ಗೆ ಆಕೆ ಹೆಜ್ಜೆ ಹಾಕುತ್ತಿರುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿವೆ.

ಸಾಮಾನ್ಯವಾಗಿ ತರಕಾರಿ ಅಂಗಡಿಗಳಲ್ಲಿ ಆಲೂಗಡ್ಡೆ ಎಷ್ಟು? ಈರುಳ್ಳಿ ಬೆಲೆ ಎಷ್ಟು? ಎಂಬ ಪ್ರಶ್ನೆಗಳು ಕೇಳಿಬರುತ್ತವೆ. ಆದರೆ ಈ ಅಂಗಡಿಯಲ್ಲಿ ಮಾತ್ರ ಇಲ್ಲಿ ಏನಾಗ್ತಿದೆ? ಎಂಬ ಕುತೂಹಲವೇ ಗ್ರಾಹಕರನ್ನ ಸೆಳೆಯುವಂತೆ ಮಾಡುತ್ತಿದೆ.
ವ್ಯಾಪಾರದಲ್ಲಿ ಗ್ರಾಹಕರ ಗಮನ ಸೆಳೆಯುವುದು ಮೊದಲ ಹೆಜ್ಜೆ. ಆ ನಿಟ್ಟಿನಲ್ಲಿ ಈ ಅಂಗಡಿಕಾರನ ತಂತ್ರ ಮಾತ್ರ ಸಖತ್ ಟ್ರೆಂಡಿಯಾಗಿದೆ. ತರಕಾರಿಗಳಿಗಿಂತ ಡ್ಯಾನ್ಸ್ ನೋಡಲು ಜನ ಜಮಾಯಿಸಿದ್ದರೂ, ಅಂಗಡಿಯ ಹೆಸರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆದ್ರೆ ಈ ತಂತ್ರ ನಿಜವಾಗಿಯೂ ಅಂಗಡಿಯಲ್ಲಿ ವ್ಯಾಪಾರ ಕುದುರಿಸಿದೆ ಅನ್ನೋದಕ್ಕೆ ಸ್ಪಷ್ಟತೆ ಇಲ್ಲ.
