ರಾಬಟ್: ಮೊರಕ್ಕೋದಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬೆಕ್ಕೊಂದು ವಾಕ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಮರಾಕೇಶ್‍ನಲ್ಲಿ ನಡೆದ ಕ್ರಿಶ್ಚಿಯನ್ ಡಿಯರ್ ಫ್ಯಾಷನ್ ಶೋ ನಡೆಯುವ ವೇಳೆ ಅಲ್ಲಿ ಬೆಕ್ಕೊಂದು ಮಾಡೆಲ್‍ಗಳ ಕ್ಯಾಟ್ ವಾಕ್ ವಿರುದ್ಧವಾಗಿ ನಡೆದುಕೊಂಡು ಹೋಗಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.
🐱 Cat interrupts fashion show – need we say more? 🐱
[Tap to expand] https://t.co/O0vRironhSpic.twitter.com/OOI9K20nF8
— BBC News (World) (@BBCWorld) May 5, 2019
ಶೋಗೆ ಬಂದಿದ್ದ ಪ್ರೇಕ್ಷಕರ ಜೋರಾಗಿ ಕಿರುಚುವ ಶಬ್ದದ ನಡುವೆಯು ಸ್ಥಳಕ್ಕೆ ಎಂಟ್ರಿ ಕೊಟ್ಟಿದೆ. ನಡೆದುಕೊಂಡು ಮುಂದೆ ಪ್ರೇಕ್ಷಕರ ಗುಂಪಿನೊಳಗೆ ಹೋಗಿ ಮೂತ್ರವಿಸರ್ಜನೆ ಮಾಡಿ ಅಲ್ಲಿಂದ ಜನರೊಳಗೆ ಕಣ್ಮರೆಯಾಗಿದೆ.
ಫ್ಯಾಷನ್ ಶೋಗಳಲ್ಲಿ ಪ್ರಾಣಿಗಳು ಕಾಣಿಸಿಕೊಂಡಿರುವುದು ಇದೇ ಮೊದಲೆನಲ್ಲ. ಜನವರಿ ತಿಂಗಳಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬಾಲಿವುಡ್ ನಟ ಸಿದ್ಧರ್ಥ್ ಮೊಲ್ಹೋತ್ರಾ ಪಾಲ್ಗೊಂಡಿದ್ದ ಫ್ಯಾಶನ್ ಶೋದಲ್ಲಿ ನಾಯಿಯೊಂದು ಭಾಗವಹಿಸಿತ್ತು.












