ಬೆಂಗಳೂರು: ಯಶಸ್ವಿ ಚಲನಚಿತ್ರ `ರಾಜಕುಮಾರ’ ಸ್ಯಾಂಡಲ್‍ವುಡ್ ನಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದೆ. ಸಿನಿಮಾದ ಹಾಡುಗಳು ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಸಿನಿರಸಿಕರನ್ನು ಸೆಳೆಯುವಲ್ಲಿ ರಾಜಕುಮಾರ ಯಶಸ್ವಿಯಾಗಿತ್ತು.
ಇದೇ ಸಿನಿಮಾದ `ಬೊಂಬೆ ಹೇಳುತೈತೆ’ ಹಾಡು ಇನ್ನೂ ಜನ-ಮನದಲ್ಲಿ ಉಳಿದಿದೆ. ಇದೇ ಹಾಡನ್ನು ಹಲವರು ತಮ್ಮದೆ ಶೈಲಿಯಲ್ಲಿ ಹಾಡುವ ಮೂಲಕ ಪ್ರೀತಿಯನ್ನು ಪಡೆದುಕೊಂಡಿದ್ದಾರೆ. ಈಗ ಇದೇ ಹಾಡನ್ನು ತುಳು ಭಾಷೆಯಲ್ಲಿ ಹಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉಡುಪಿಯ ಸುಹಾನ್ ಶೇಖ್ ಎಂಬವರು ತುಳು ಭಾಷೆಯಲ್ಲಿ ಹಾಡಿದ್ದಾರೆ. ಸುಂದರ ಕಡಲತೀರದಲ್ಲಿ ಕುಳಿತಿರುವ ಯುವಕ ಭಾವನಾಭರಿತವಾಗಿ ಹಾಡುವುದನ್ನು ನೋಡಲು ಇಷ್ಟವಾಗುತ್ತದೆ.
ಮೂಲ ಹಾಡನ್ನು ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದ್ದು, ಯೂಟ್ಯೂಬ್ ನಲ್ಲಿ ಇದೂವರೆಗೂ ಈ ಹಾಡು 36 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ.