ಕನ್ನಡಿಗರಿಗೆ ಮಹಾ ಮನರಂಜನೆ ನೀಡುವ ತನ್ನ ಭರವಸೆಯನ್ನು ಮರೆಯದ ಕಲರ್ಸ್ ಕನ್ನಡ, ಇದೀಗ ಬಿಗ್ ಬಾಸ್ ನ ಹತ್ತನೇ ಸೀಸನ್ ಅನ್ನು ಹೊತ್ತು ತಂದಿದೆ. ಕನ್ನಡ ಬಿಗ್ ಬಾಸ್ (Big Boss Kannada) ಹೊಸ ಸೀಸನ್ ಅಕ್ಟೋಬರ್ 8 ರಿಂದ ಆರಂಭಗೊಳ್ಳಲಿದೆ. ಅಕ್ಟೋಬರ್ 8ನೇ ತಾರೀಖಿನ ಸಂಜೆ 6 ಗಂಟೆಗೆ ಸ್ಪರ್ಧಿಗಳನ್ನು ಮನೆಯೊಳಕ್ಕೆ ಕಳಿಸಲಾಗುವುದು. ದೈನಂದಿನ ಸಂಚಿಕೆಗಳು ಮರುದಿನದಿಂದ ಪ್ರತಿ ದಿನ ರಾತ್ರಿ 9.30ರಿಂದ ಪ್ರಸಾರವಾಗುತ್ತವೆ. ಬಿಗ್‌ಬಾಸ್ ಕನ್ನಡದ ಹತ್ತನೇ ವರ್ಷಾಚರಣೆಯ ಈ ಸೀಸನ್ ಅನ್ನು ವಯಕಾಮ್18ರ ಒಟಿಟಿ ಫ್ಲ್ಯಾಟ್‌ಫಾರಂ ಆದ ಜಿಯೋ ಸಿನಿಮಾ (JioCinema) ದಲ್ಲಿ 24 ಗಂಟೆ ಲೈವ್ ಚಾನಲ್‌ನಲ್ಲಿ ಉಚಿತವಾಗಿ ವೀಕ್ಷಿಸುವ ಸೌಲಭ್ಯವನ್ನು ಈ ಬಾರಿ ಕಲ್ಪಿಸಲಾಗಿದೆ.
‘ಬಿಗ್‌ಬಾಸ್ ಕನ್ನಡ’ ಹತ್ತನೇ ಆವೃತ್ತಿಯ ಕುರಿತು ಕುತೂಹಲ ಬೆಳೆಯುತ್ತಿರುವ ಹೊತ್ತಿನಲ್ಲಿಯೇ ಹಬ್ಬದ ಮನರಂಜನಾ ಮೆನ್ಯೂ ಜಿಯೋ ಸಿನಿಮಾ ಮೂಲಕ ಇನ್ನಷ್ಟು ವೈವಿಧ್ಯಗೊಂಡಿದೆ. ಇದೇ ಮೊದಲ ಬಾರಿಗೆ ‘ಬಿಗ್‌ಬಾಸ್ ಕನ್ನಡ’ ಜಿಯೋ ಸಿನಿಮಾದಲ್ಲಿಯೂ ಪಸಾರವಾಗಲಿದ್ದು, ದಿನದ ಇಪ್ಪತ್ತನಾಲ್ಕು ಗಂಟೆಯೂ ಮನೆಯಲ್ಲಿ ಏನಾಗುತ್ತಿದೆ ಎಂಬುದರ ನೇರಪ್ರಸಾರವನ್ನು ವೀಕ್ಷಕರು 24 ಗಂಟೆ ಲೈವ್ ಚಾನಲ್‌ನಲ್ಲಿ ನೋಡಬಹುದಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ದಿನದ ಎಪಿಸೋಡಿನ ಹೊರತಾಗಿಯೂ ಹಲವು ವೈವಿಧ್ಯದ ಎಕ್ಸ್ ಕ್ಯೂಸಿವ್ ಮತ್ತು ಅನ್‌ಸೀನ್ ಮನರಂಜನಾ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ಇರಲಿವೆ. ‘ಬಿಗ್ ನ್ಯೂಸ್’, ‘ಅನ್‌ಸೀನ್ ಕಥೆಗಳು’, ‘ ಜಿಯೋ ಸಿನಿಮಾ ಫನ್ ಪ್ರೈಡೇ’, ‘ಡೀಪ್ ಆಗಿ ನೋಡಿ…’ ಹೀಗೆ ಹಲವಾರು ರೂಪದಲ್ಲಿ, ಮನೆಯೊಳಗಿನ ಕುತೂಹಲಕಾರಿ ಘಟನಾವಳಿಗಳನ್ನು ವೀಕ್ಷಕರಿಗೆ ತಲುಪಿಸಲು ವೇದಿಕೆ ಸಜ್ಜುಗೊಂಡಿದೆ. ಬೆಳವಣಿಗೆಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವ ‘ಲೈವ್ ಆಕರ್ಷಣೆಯಾಗಿದೆ. ಮನೆಯೊಳಗೆ ನಡೆಯುವ ನಾಟಕೀಯ ಇನ್ನೊಂದು ವಿಶೇಷ.
ಇದರ ಜೊತೆಜೊತೆಯಲ್ಲಿ ‘ವಾಚ್ ಆಂಡ್ ವಿನ್’, ‘ಮೀಮ್ ದ ಮೊಮೆಂಟ್’, ‘ಹೈಪ್ ಚಾಟ್’, ‘ವಿಡಿಯೊ ವಿಚಾರ್’ಗಳ ಮೂಲಕ ಬಿಗ್‌ಬಾಸ್ ಕನ್ನಡದ ಅಭಿಮಾನಿಗಳಿಗೆ, ಸಂವಾದ ನಡೆಸುವ ಅಪೂರ್ವ ಅವಕಾಶವನ್ನೂ ಕಲ್ಪಿಸಲಾಗಿದೆ. ಇಷ್ಟೇ ಅಲ್ಲ, ಇದೇ ಮೊದಲ ಬಾರಿಗೆ, ಟೀವಿಯಲ್ಲಿ ಷೋ ನೋಡಿ, ಅಲ್ಲಿ ಕೇಳಲಾದ ಪ್ರಶ್ನೆಗಳಿಗೆ ಜಿಯೋ ಸಿನಿಮಾದಲ್ಲಿ ಉತ್ತರಿಸುವ ಮೂಲಕ ಪ್ರತಿದಿನವೂ ರೋಮಾಂಚಕಾರಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವನ್ನೂ ಪರಿಚಯಿಸಲಾಗಿದೆ. ಈ ಎಲ್ಲ ಸಂವಾದ ದಾರಿಗಳು ವೀಕ್ಷಕರ ಅನುಭವವನ್ನು ಇನ್ನಷ್ಟು ರೋಚಕಗೊಳಿಸುವುದರ ಜೊತೆಗೆ, ಮನೆಯೊಳಗೆ ತೆಗೆದುಕೊಳ್ಳಲಾಗುವ ಅತಿಮುಖ್ಯ ನಿರ್ಧಾರಗಳ ಮೇಲೆ ಪ್ರಭಾವ ಬೀರುವ, ತಮ್ಮಿಷ್ಟದ ಅಭ್ಯರ್ಥಿಯನ್ನು ಉಳಿಸುವ ಅಧಿಕಾರವನ್ನೂ ನೀಡಲಿವೆ.
ಅಂತೂ ಹಲವು ಹೊಸತನಗಳೊಂದಿಗೆ ನಿಮ್ಮ ಮನದಂಗಳಕ್ಕೆ ದಾಳಿಯಿಡಲು ಬಿಗ್ ಬಾಸ್ ಹತ್ತನೇ ಸೀಸನ್ ಸಜ್ಜಾಗಿದೆ. ನೀವೂ ತಯಾರಾಗಿ, ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಲಾಂಚ್ ಎಪಿಸೋಡ್ ಅಕ್ಟೋಬರ್ 8 ರ ಸಂಜೆ ಆರು ಗಂಟೆಗೆ ಮತ್ತು ನಂತರ ಪ್ರತಿದಿನ ರಾತ್ರಿ 9.30ಕ್ಕೆ. ಜೊತೆಗೆ ಬಿಗ್‌ಬಾಸ್ ಕನ್ನಡ 10ನೇ ಸೀಸನ್‌ನ ಅನಿಯಮಿತ ಮನರಂಜನೆಯನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ಆನಂದಿಸಿ. ಹತ್ತನೇ ಸೀಸನ್ ಕನ್ನಡ ಬಿಗ್ ಬಾಸ್ ನ ವಿಶೇಷಗಳು ಹಲವು. ಇದೇ ಮೊದಲ ಬಾರಿಗೆ ‘ಹ್ಯಾಪಿ ಬಿಗ್ ಬಾಸ್’ ಎಂಬ ಥೀಮ್ ಹೊಂದಿರುವುದು ಮೊದಲನೇ ವಿಶೇಷ. ಹದಿನಾರು ಸ್ಪರ್ಧಿಗಳು ಭಾಗವಹಿಸಲಿರುವ ಈ ಸೀಸನ್ ನ ಮನೆಯನ್ನು ಕಾಯಲು 73 ಕ್ಯಾಮರಾಗಳು ಸಜ್ಜಾಗಿವೆ.
ಹತ್ತನೇ ಆವೃತ್ತಿಗಾಗಿ ಕಲರ್ಸ್ ಕನ್ನಡವು ಹೊಸ ಬಿಗ್ ಬಾಸ್ ಮನೆಯನ್ನೇ ಕಟ್ಟಿರುವುದು ಮತ್ತೊಂದು ವಿಶೇಷ. ಬೆಂಗಳೂರಿನ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಈ ಹೊಸ ಮನೆ ಹೆಚ್ಚು ವಿಶಾಲವಾಗಿದ್ದು, ಬೇರೆಲ್ಲ ಭಾಷೆಯ ಬಿಗ್ ಬಾಸ್ ಮನೆಗಳಿಗಿಂತ ದೊಡ್ಡದಾಗಿದೆ. 12 ಸಾವಿರ ಚದರಡಿಗಳ ಈ ಮಹಾಮನೆಯಲ್ಲಿ ಮೊದಲಿಗಿಂತ ದೊಡ್ಡ ಆಟಗಳನ್ನು ಆಡುವುದು ಹಾಗೂ ಟಾಸ್ಕ್ ಗಳನ್ನು ಮಾಡುವುದು ಸಾಧ್ಯವಿದೆ. ಹಾಗಾಗಿ ಭಾವನೆಗಳ ಆಟವೂ ಈ ಸಲ ದೊಡ್ಡದಾಗಲಿದೆ.
Web Stories