ತಲ್ವಾರಿನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ ಭುವಿ- ವೀಡಿಯೋ ವೈರಲ್

Public TV
1 Min Read
bhuvaeshwar kumar

ದುಬೈ: ಏಷ್ಯಾಕಪ್ 2018 ಎ ಗುಂಪಿನ ಪಂದ್ಯದಲ್ಲಿ ಪಾಕ್ ಎದುರು ಟೀಂ ಇಂಡಿಯಾ ಭರ್ಜರಿ ಜಯಗಳಿಸಿದ ಬಳಿಕ ಗೆಲುವಿಗೆ ಕಾರಣರಾಗಿದ್ದ ಭುವನೇಶ್ವರ್ ಹಾಗೂ ತಂಡದ ಆಟಗಾರರು ತಲ್ವಾರ್ ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಭುವಿ ತಲ್ವಾರ್ ಹಿಡಿದು ಕೇಕ್ ಕತ್ತರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಂ ಇಂಡಿಯಾ ಮಾಜಿ ನಾಯಕ ಧೋನಿ, ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರು ಪಾಕ್ ವಿರುದ್ಧದ ಗೆಲುವಿನ ಸಂಭ್ರಮವನ್ನು ಆಚರಿಸಿದ್ದಾರೆ. ಪಂದ್ಯದ ಬಳಿಕ ಹೋಟೆಲ್‍ಗೆ ತೆರಳಿದ್ದ ತಂಡ ಅಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದೆ.

https://www.instagram.com/p/Bn7ysflgVME/?utm_source=ig_embed&utm_campaign=embed_video_watch_again

ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಭುವನೇಶ್ವರ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ಮಿಂಚಿದ್ದರು. ಸದ್ಯ ಏಷ್ಯಾಕಪ್ ಟೂರ್ನಿಯ ತಂಡದ ಪಟ್ಟಿಯಲ್ಲಿ  4 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿರುವ ಟೀಂ ಇಂಡಿಯಾ ಸೂಪರ್ 4 ಹಂತದಲ್ಲಿ ಇಂದು ಬಾಂಗ್ಲಾ ತಂಡವನ್ನು ಎದುರಿಸಲಿದೆ. ಗುರುವಾರ ನಡೆದ ಅಫ್ಘಾನಿಸ್ತಾನದ ವಿರುದ್ಧ ಪಂದ್ಯದಲ್ಲಿ ಬಾಂಗ್ಲಾ ಹೀನಾಯ ಸೋಲು ಪಡೆದಿದ್ದು ತಂಡವನ್ನು ಒತ್ತಡದಲ್ಲಿ ಸಿಲುಕಿಸಿದೆ.

ಇತ್ತ ಟೀಂ ಇಂಡಿಯಾ ಕೂಡ ಆಟಗಾರರ ಗಾಯದ ಸಮಸ್ಯೆ ಎದುರಿಸುತ್ತಿದೆ. ಪಾಕ್ ವಿರುದ್ಧ ಪಂದ್ಯದಲ್ಲಿ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಸೇರಿದಂತೆ ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್ ಟೂರ್ನಿಯಿಂದ ಔಟ್ ಆಗಿದ್ದಾರೆ. ಸದ್ಯ ಈ ಆಟಗಾರರ ಸ್ಥಾನದಲ್ಲಿ ಜಡೇಜಾ, ದೀಪಕ್ ಚಹರ್, ಸಿದ್ದಾರ್ಥ್ ಕೌಲ್ ರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಗಾಯಗೊಂಡಿರುವ ಎಲ್ಲಾ ಆಟಗಾರರು ತವರಿಗೆ ಹಿಂತಿರುಗಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
Leave a Comment

Leave a Reply

Your email address will not be published. Required fields are marked *