ಚಿಕ್ಕೋಡಿ: ಕೋತಿ ಹಾಗೂ ಶ್ವಾನ ಬದ್ಧ ವೈರಿಗಳು. ಆದ್ರೆ ಇಲ್ಲಿ ದಿನನಿತ್ಯ ಕೋತಿ ಹಾಗೂ ಎರಡು ಶ್ವಾನಗಳು ಅನ್ಯೋನ್ಯವಾಗಿ ಬಾಳುತ್ತಿದ್ದು, ಮನುಷ್ಯನಿಗೆ ಅನ್ಯೋನ್ಯತೆಯ ಪಾಠ ಹೇಳಿಕೊಡುವಂತಿದೆ.
ಹೌದು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಇಂಥ ಅಪರೂಪದ ಘಟನೆ ಸಾಕ್ಷಿಯಾಗಿದೆ. ಕೋತಿಗಳ ಗುಂಪಿನಿಂದ ಮಿಸ್ ಆಗಿ ಅನಾಥವಾಗಿದ್ದ ಮಂಗವನ್ನು ಸ್ಥಳೀಯ ನಿವಾಸಿ ದೊಡ್ಡಮನಿ ಕುಟುಂಬ ಸಾಕಿ ಸಲುಹುತ್ತಿದೆ. ಹೀಗೆ ಸಾಕಿದ್ದ ಕೋತಿಗೆ ಅವರ ಮನೆಯಲ್ಲಿದ್ದ ಶ್ವಾನಗಳ ಜೊತೆಗೆ ಫ್ರೆಂಡ್‍ಶಿಪ್ ಆಗಿ ಅನ್ಯೋನ್ಯವಾಗಿ ಬಾಳುತ್ತಿವೆ. ಕೋತಿಗೆ ಏನಾದ್ರೂ ಆದ್ರೆ ಅದರ ರಕ್ಷಣೆಗೆ ನಾಯಿ ನಿಲ್ಲುತ್ತದೆ.
ಬಹುತೇಕ ಕಡೆ ಕೋತಿಗಳು ಬಂದ್ರೆ ಶ್ವಾನಗಳು ದಾಳಿ ಮಾಡಿ ಅವುಗಳನ್ನ ಓಡಿಸುತ್ತವೆ. ಆದ್ರೆ ಇಲ್ಲಿ ಕೋತಿಗೆ ಯಾವುದೇ ಬೇರೆ ಕಡೆಯಿಂದ ಬಂದ ಶ್ವಾನ ಆವಾಜ್ ಹಾಕಿದ್ರೆ ಈ ಶ್ವಾನ ಕೋತಿಯ ರಕ್ಷಣೆಗೆ ನಿಲ್ಲುತ್ತದೆ. ಶ್ವಾನ ಹಾಗೂ ಕೋತಿಯ ಅನ್ಯೋನ್ಯತೆಗೆ ಸ್ಥಳೀಯರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ಧರ್ಮ ಹಾಗೂ ಜಾತಿ ಜಾತಿಗಳ ಹೆಸರಿನಲ್ಲಿ ಹೊಡೆದಾಡುತ್ತಿರುವ ಮನುಷ್ಯ ಜೀವಿಗೆ ಅನ್ಯೋನ್ಯತೆಯ ಪಾಠವನ್ನ ಈ ಮೂಕ ಪ್ರಾಣಿಗಳು ಹೇಳಿಕೊಡುವಂತಿವೆ.
https://www.youtube.com/watch?v=LXcfjgHior8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv