17,500 ಅಡಿ ಎತ್ತರದಲ್ಲಿ 55ರ ಐಟಿಬಿಪಿ ಅಧಿಕಾರಿಯ 65 ಪುಶ್ ಅಪ್ ವಿಡಿಯೋ ವೈರಲ್

Public TV
2 Min Read
commandet pushups

ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ತಮ್ಮ ಕೇಂದ್ರ ಪರ್ವತಾರೋಹಣ ತಂಡದೊಂದಿಗೆ ಹಿಮಾಲಯ ಪರ್ವತವಾದ ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರಿದೆ. ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಪಡೆಯ ಆರು ಉನ್ನತ ಪರ್ವತಾರೋಹಿಗಳ ತಂಡವು ಫೆಬ್ರವರಿ 20 ರಂದು 20,177 ಅಡಿ ಎತ್ತರದ ಶಿಖರವನ್ನು ಏರಿದೆ ಎಂದು ಐಟಿಬಿಪಿ ತಿಳಿಸಿದೆ.

ಐಟಿಬಿಪಿ ಬಾರ್ಡರ್ ಪೊಲೀಸ್ ತಂಡವು ಮೌಂಟ್ ಕಾರ್ಜೋಕ್ ಕಾಂಗ್ರಿಯನ್ನು ಮೊದಲ ಬಾರಿ ಆರೋಹಣ ಮಾಡಿದ್ದಾರೆ. ಏಸ್ ಪರ್ವತಾರೋಹಿ ಕಮಾಂಡೆಂಟ್ ರತನ್ ಸಿಂಗ್ ಸೋನಾಲ್ ನೇತೃತ್ವದ ಐಟಿಬಿಪಿಯ 6 ಉನ್ನತ ದರ್ಜೆಯ ಪರ್ವತಾರೋಹಿಗಳ ತಂಡವು ಲಡಾಖ್‍ನ ಹಿಮಪರ್ವತವಾದ 20,177 ಅಡಿ ಎತ್ತರದ ಶಿಖರವನ್ನು ಏರಿತು ಎಂದು ಐಟಿಬಿಪಿ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

ತೀವ್ರವಾದ ಚಳಿಗಾಲದಲ್ಲಿ ದೈಹಿಕ ಮತ್ತು ಮಾನಸಿಕ ಗಟ್ಟಿತನವನ್ನು ತಡೆದುಕೊಂಡು ತಂಡವು ಯಾವುದೇ ವಿಶೇಷ ಪರ್ವತಾರೋಹಣ ಉಪಕರಣಗಳು ಮತ್ತು ಬೆಂಬಲ ವ್ಯವಸ್ಥೆಯನ್ನು ಬಳಸಿಕೊಳ್ಳದೆ ಆರೋಹಣವನ್ನು ಪೂರ್ಣಗೊಳಿಸಿತು ಎಂದು ಐಟಿಬಿಪಿಯ ಅಧಿಕಾರಿ ತಿಳಿಸಿದರು.

ಮೌಂಟ್ ಕಾರ್ಜೋಕ್ ಕಂಗ್ರಿಯನ್ನು ಏರುತ್ತಿರುವ ಕೆಲ ದೃಶ್ಯಗಳನ್ನು ಐಟಿಬಿಪಿ ತಂಡವು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

ಮೈ ನಡುಗಿಸುವ ಚಳಿಯಲ್ಲಿ, ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 17,500 ಅಡಿ ಎತ್ತರದಲ್ಲಿ ಒಂದೇ ಬಾರಿಗೆ 65 ಪುಷ್-ಅಪ್‍ಗಳನ್ನು ಪೂರ್ಣಗೊಳಿಸಿದ ಕಮಾಂಡೆಂಟ್ ಸೋನಾಲ್ ಅವರ ವೀಡಿಯೋ ಕೂಡ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತೃತೀಯಲಿಂಗಿ

65 ಪುಷ್-ಅಪ್‍ಗಳನ್ನು ಹೊಡೆದ ಸೋನಾಲ್ 55 ವರ್ಷ ವಯಸ್ಸಿನ ಕಮಾಂಡೆಂಟ್ ಆಗಿದ್ದು, ಅವರ ಈ ಧಾಡಸಿ ವಾಯ್ಯಾಮವನ್ನು ನೋಡಿದ ನೆಟ್ಟಿಗರೊಬ್ಬರು ನಮ್ಮ ಸೇನಾ ಸಿಬ್ಬಂದಿ ಎಷ್ಟು ಪ್ರಬಲರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋನಾಲ್ ಅವರ ಈ ಧಾಡಸಿ ವ್ಯಾಯಾಮದ ವೀಡಿಯೋವು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 13,000 ಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದುಕೊಂಡಿದ್ದು, 1,800 ಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ.

1962 ರಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ರಚಿಸಲಾಯಿತು. ಹಿಮಾಲಯದ 3,488 ಕಿಮೀ ಉದ್ದದ ಗಡಿ ಅಲ್ಲದೇ ನಕ್ಸಲ್ ವಿರೋಧಿ ಕಾರ್ಯಾಚರಣೆ ಮತ್ತು ಇತರ ಆಂತರಿಕ ಭದ್ರತಾ ಕರ್ತವ್ಯಗಳಿಗೆ ಈ ಪಡೆಯನ್ನು ನಿಯೋಜಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *