ಚಲನಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನ ಕೊಟ್ಟಿರಲಿಲ್ವಾ?- ಶಾಸಕನ ಆರೋಪಕ್ಕೆ ಕಿಚ್ಚನ ಆಪ್ತ ಸ್ಪಷ್ಟನೆ

Public TV
2 Min Read
sudeep

ಸಿಸಿಎಲ್ ಆಡೋದಕ್ಕೆ ಸಮಯವಿದೆ, ಫಿಲ್ಮ್ ಫೆಸ್ಟಿವಲ್ ಭಾಗವಹಿಸೋದಕ್ಕೆ ಸಮಯವಿಲ್ವಾ ಎಂದು ಸುದೀಪ್ (Sudeep) ವಿರುದ್ಧ ಕಿಡಿಕಾರಿದ್ದ ಶಾಸಕ ರವಿ ಗಣಿಗ ಮಾತಿಗೆ ನಟನ ಆಪ್ತ ಚಂದ್ರಚೂಡ್ ಚಕ್ರವರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಚಲನಚಿತ್ರೋತ್ಸವಕ್ಕೆ ಆಹ್ವಾನ ಕೊಡದೇ ಸುದೀಪ್ ಅವರು ಬರೋಕೆ ಹೇಗೆ ಸಾಧ್ಯ ಎಂದು ಸುದೀಪ್ ಆಪ್ತ ಚಂದ್ರಚೂಡ್ ಖಡಕ್ ಆಗಿ ಮಾತನಾಡಿದ್ದಾರೆ.

chandrachuda

ಚಲನಚಿತ್ರೋತ್ಸವಕ್ಕೆ ಬರದೇ ಇದಿದ್ದಕ್ಕೆ, ರಾಜ್ಯ ಪ್ರಶಸ್ತಿ ನಿರಾಕರಿಸಿದ್ದಕ್ಕೆ ಸುದೀಪ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದ ಶಾಸಕ ರವಿ ಗಣಿಗ (Ravi Ganiga) ಅವರಿಗೆ ಸುದೀಪ್ ಆಪ್ತ ಮಾತನಾಡಿ, ಚಲನಚಿತ್ರೋತ್ಸವಕ್ಕೆ ಆಮಂತ್ರಣ ಕೊಡದೆ ಸುದೀಪ್ ಅವರು ಹೇಗೆ ಬರೋಕೆ ಸಾಧ್ಯ? ಸಾಧು ಕೋಕಿಲ ಅವರು ಮಾಡಿರುವ ಚಿತ್ರೋತ್ಸವದ ಅಪಭೃಂಶ ಇದು. ಇನ್ನೂ ಶಾಸಕ ರವಿ ಗಣಿಗ ಅವರಿಗೆ ಸುದೀಪ್ ಹೆಸರನ್ನ ಸರಿಯಾಗಿ ಹೇಳುವ ಧೈರ್ಯವೂ ಇಲ್ಲ. ಸುಮ್ಮನೆ ಆರೋಪ ಮಾಡೋದಲ್ಲ ಎಂದು ಚಂದ್ರಚೂಡ್ ಚಕ್ರವರ್ತಿ (Chakravarthy Chandrachud) ತಕ್ಕ ಉತ್ತರ ನೀಡಿದ್ದಾರೆ.

2004ರಿಂದ ಇವತ್ತಿನವರೆಗೂ ಯಾವುದೇ ಕಾರ್ಯಕ್ರಮಕ್ಕೆ ಭಾಗಿಯಾಗಿ ಅವಾರ್ಡ್‌ಗಳನ್ನು ತೆಗೆದುಕೊಂಡಿಲ್ಲ ಅಂದ್ರೆ, 2019ರ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ರು. ಆದರೆ ಅದನ್ನು ತಿರಸ್ಕರಿಸಿಲ್ಲ. ಈ ಹಿಂದೆ ಡಾಕ್ಟರೇಟ್ ಬಂದಾಗ ಸಮಾಜಮುಖಿ ಕೆಲಸ ಮಾಡಿದವರಿಗೆ ಕೊಡಿ ಅಂದ್ರೋ ಈಗಲೂ ಹಾಗೆ. ಈ ಯೋಚನೆ ಹಿಂದೆ ಕಾರಣವಿತ್ತು ಒಂದಿಷ್ಟು ಅವಮಾನವಿತ್ತು ಎಂದಿದ್ದಾರೆ.

sudeep 1 1

ಈ ಹಿಂದೆ ‘ರಂಗ ಎಸ್‌ಎಸ್‌ಎಲ್‌ಸಿ’ ಸಮಯದಲ್ಲಿ ಅವರಿಗೆ ಸ್ಟೇಟ್ ಅವಾರ್ಡ್ ಬರೋದು ಇರುತ್ತದೆ. ಅದರ ಹಿಂದಿನ ಸರ್ಕಾರದಿಂದ ಅವರಿಗೆ ಪತ್ರ ಬಂದಿರುತ್ತದೆ. ನಿಮಗೆ ರಾಜ್ಯೋತ್ಸವ ಬಂದಿದೆ ಅಂತ, ಮರುದಿನ ಆ ಅವಾರ್ಡ್ ಬೇರೆ ಅವರಿಗೆ ಕೊಟ್ಟಿರುತ್ತಾರೆ. `ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾ ಪ್ರಶಸ್ತಿ ಅನೌನ್ಸ್ ಮಾಡೋ ಟೈಮ್‌ನಲ್ಲೂ ಹೀಗೆ ಆಯ್ತು ಎಂದು ರವಿ ಗಣಿಗ ಆರೋಪಕ್ಕೆ ಸುದೀಪ್ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ, ಕಾರ್ಯಕ್ರಮವೊಂದರಲ್ಲಿ 2019ರಲ್ಲಿ ರಾಜ್ಯ ಪ್ರಶಸ್ತಿ ನಿರಾಕರಿಸಿದ್ದಕ್ಕೆ ಸುದೀಪ್‌ರನ್ನು ಶಾಸಕ ರವಿ ಗಣಿಗ ಟೀಕಿಸಿದ್ದರು. ರಾಜ್ಯ ಪ್ರಶಸ್ತಿ ನಿರಾಕರಿಸಿದ್ದರ ಬಗ್ಗೆ ಸುದೀಪ್ ಹೆಸರು ಹೇಳದೇ ರವಿ ಗಣಿಗ ಮಾತನಾಡಿದ್ದರು. ಜೊತೆಗೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸದ ಸುದೀಪ್ ಸಿಸಿಎಲ್ ಆಡುತ್ತಿರುವುದಕ್ಕೆ ಪ್ರಶ್ನಿಸಿದ್ದರು. ಕಲಾವಿದರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಎಂದು ಹೇಳಿದ್ದರು.

Share This Article