ವಾಷಿಂಗ್ಟನ್: ವ್ಯಕ್ತಿಯೋರ್ವ ತನ್ನ ಮೂರು ಮಕ್ಕಳಿಗೆ ಜೊತೆ ತನ್ನ ಪತ್ನಿಗೂ ಗುಂಡಿಕ್ಕಿ ಕೊಂದು ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೆರಿಕಾದ ಆಗ್ನೇಯ ಸ್ಯಾನ್ ಡಿಯಾಗೋದಲ್ಲಿ ನಡೆದಿದೆ.
ಈ ಘಟನೆ ಇಂದು ಮುಂಜಾನೆ ನಡೆದಿದ್ದು, 5, 9 ಮತ್ತು 11 ರ ಪ್ರಾಯದ ತನ್ನ ಮೂರು ಮಕ್ಕಳಿಗೆ ಗುಂಡು ಹಾರಿಸಿರುವ ವ್ಯಕ್ತಿ ನಂತರ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ನಾಲ್ವರ ಸಾವಿನ ನಂತರ ತಾನೇ ಶೂಟ್ ಮಾಡಿಕೊಂಡು ಮೃತ ಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಕೌಟುಂಬಿಕ ವಿಚಾರವಾಗಿ ಗಂಡ ಹೆಂಡತಿ ಇಬ್ಬರು ಪ್ರತಿದಿನ ಜಗಳವಾಡುತ್ತಿದ್ದರು. ಇಂದು ಬೆಳಗ್ಗೆ 3 ಗಂಟೆಯ ವೇಳೆ ಯಾವುದೋ ವಿಚಾರಕ್ಕೆ ಗಂಡ ಹೆಂಡತಿ ಇಬ್ಬರು ಜೋರಾಗಿ ಜಗಳವಾಡಿದ್ದಾರೆ. ನಂತರ ಮನೆಯಲ್ಲಿ ಇಟ್ಟುಕೊಂಡಿದ್ದ ಹ್ಯಾಂಡ್ ಗನ್ನಿಂದ ಮಕ್ಕಳು ಸೇರಿ ಹೆಂಡತಿಯನ್ನು ಶೂಟ್ ಮಾಡಿ. ತಾನು ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಪೊಲೀಸರು ಮೃತಪಟ್ಟವರ ಹೆಸರನ್ನು ಬಿಡುಗಡೆ ಮಾಡಿಲ್ಲ.
Advertisement
ಬೆಳಗಿನ ಜಾವ ಮನೆಯಲ್ಲಿ ಗನ್ ಸೌಂಡ್ ಕೇಳಿಸಿದಾಗ ನೆರೆಹೊರೆಯವರು ಬಂದು ನೋಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ನಾವು ಘಟನಾ ಸ್ಥಳಕ್ಕೆ ಬಂದಾಗ ನಾಲ್ವರು ಮೃತ ಪಟ್ಟಿದ್ದರು. ಅದರಲ್ಲಿ ಒಂದು ಮಗು ಬದುಕಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಯಾನ್ ಡಿಯಾಗೋ ಪೊಲೀಸ್ ಲೆಫ್ಟಿನೆಂಟ್ ಮ್ಯಾಟ್ ಡಾಬ್ಸ್ ಹೇಳಿದ್ದಾರೆ.