ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ಕ್ಷೇತ್ರ (Shikaripura Constituency) ದಿಂದ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಗೆಲ್ಲದಂತೆ ವಾಮಾಚಾರ ನಡೆಸಲಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿಕಾರಿಪುರ ತಾಲೂಕಿನ ಬಂಡಿಬೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ ಸರ್ವೆನಂಬರ್ 36 ರಲ್ಲಿರುವ ಯಡಿಯೂರಪ್ಪ ಅವರ ಅಡಿಕೆ ತೋಟದಲ್ಲಿ ಕಾಡುಪ್ರಾಣಿಯನ್ನು ಕೊಂದು ವಾಮಾಚಾರ ನಡೆಸಲಾಗಿದೆ ಎಂದು ತೋಟ ನೋಡಿಕೊಳ್ಳುವ ಎಸ್.ಕೆ ರಮೇಶ್ (S k ramesh) ದೂರು ದಾಖಲಿಸಿದ್ದಾರೆ.
Advertisement
Advertisement
ತೋಟದ ಕಾಂಪೌಂಡ್ ಬಳಿ ವಾಮಾಚಾರ ನಡೆಸಿರುವ ಕಿಡಿಗೇಡಿಗಳು ಕಾಡುಪ್ರಾಣಿ ಹತ್ಯೆಗೈದು ತೋಟದಲ್ಲಿ ಹೂತು ಹಾಕಿದ್ದಾರೆ. ಸ್ಥಳದಲ್ಲಿ ಅರಿಶಿಣ, ಕುಂಕುಮ ಹೂವು ಪತ್ತೆಯಾಗಿದೆ. ವಿಜಯೇಂದ್ರ ಅವರಿಗೆ ಕೇಡು ಬಯಸಿ ವಾಮಾಚಾರ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಡಿಕೆಶಿಯೇ ಸಿಎಂ ಆಗಬೇಕು- ಓಲಾ, ಊಬರ್ ಚಾಲಕರ ಸಂಘಟನೆ ಆಗ್ರಹ
Advertisement
ಮೇ.11 ರಂದು ಈ ವಾಮಾಚಾರ ನಡೆದಿರುವ ಬಗ್ಗೆ ರಮೇಶ್ ಗಮನಕ್ಕೆ ಬಂದಿದೆ. ಮೇ.12 ರಂದು ದೂರು ದಾಖಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು ಸಹ ಸ್ಪಷ್ಟನೆ ನೀಡಿದ್ದು, ಪುನುಗು ಬೆಕ್ಕನ್ನ ಹೂತು ಹಾಕಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊಳ್ಳೇಗಾಲದ ಭಾಗಗಳಲ್ಲಿ ಈ ಬೆಕ್ಕುಗಳು ಪತ್ತೆಯಾಗಿದೆ ಎಂದರು.
Advertisement