LatestLeading NewsMain PostNational

ಕಾಂಗ್ರೆಸ್ ಅಗೌರವದಿಂದ ನೋವಾಗಿದೆ: ಬಿಜೆಪಿ ಸೇರ್ಪಡೆಯಾದ ಗುಲಾಂ ನಬಿ ಸೋದರಳಿಯ

ಶ್ರೀನಗರ: ಕಾಂಗ್ರೆಸ್ ಅಗೌರವದಿಂದ ನೋವಾಗಿದೆ. ಅದಕ್ಕೆ ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಗುಲಾಂ ನಬಿ ಸೋದರಳಿಯ ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಸೋದರಳಿಯ ಮುಬಾಶಿರ್ ಆಜಾದ್ ಅವರು ಇಂದು ಜಮ್ಮುವಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಈ ಫೋಟೋವನ್ನು ಟ್ಟಿಟ್ಟರ್ ನಲ್ಲಿ ಮುಬಾಶಿರ್ ಆಜಾದ್ ಅವರು ಹಂಚಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಅವರು, ಕಾಂಗ್ರೆಸ್ ನಾಯಕತ್ವದಿಂದ ನನ್ನ ಚಿಕ್ಕಪ್ಪನಿಗೆ ‘ಅಗೌರವ’ ಉಂಟಾಗಿದೆ. ಇದರಿಂದ ನನಗೂ ಸಹ ನೋವಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

ಕಾಂಗ್ರೆಸ್‍ನಲ್ಲಿ ಒಳಜಗಳದಲ್ಲಿ ಮುಳುಗಿದೆ. ಪ್ರಧಾನಿ ಮೋದಿ ನಾಯಕತ್ವದಲ್ಲಿ, ಜನರ ಕಲ್ಯಾಣಕ್ಕಾಗಿ ಕೆಲಸಗಳು ಈ ನೆಲದಲ್ಲಿ ನಡೆಯುತ್ತಿವೆ. ಅದಕ್ಕೆ ನಾನು ಇವರಿಗೆ ಸಾಥ್ ಕೊಡುತ್ತಿದ್ದೇನೆ ಎಂದು ಬರೆದು ಟ್ವೀಟ್ ಮಾಡಿದರು.

ಈ ಹಿಂದೆ ಗುಲಾಂ ನಬಿ ಆಜಾದ್ ಅವರು, ನಾನು ’24 ಕ್ಯಾರೆಟ್ ಕಾಂಗ್ರೆಸ್ಸಿಗ’, ನಮ್ಮ ಪಕ್ಷದೊಂದಿಗೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಇದನ್ನೂ ಓದಿ: ಷರಿಯತ್ ಪ್ರಕಾರ ಶಿಕ್ಷೆ ನೀಡಿದರೆ, ಹಿಜಬ್ ಧರಿಸಲು ಅವಕಾಶ ಕೊಡಬಹುದು: ರಘುಪತಿ ಭಟ್

Leave a Reply

Your email address will not be published.

Back to top button