DistrictsKarnatakaLatestMain PostShivamoggaUdupi

ಷರಿಯತ್ ಪ್ರಕಾರ ಶಿಕ್ಷೆ ನೀಡಿದರೆ, ಹಿಜಬ್ ಧರಿಸಲು ಅವಕಾಶ ಕೊಡಬಹುದು: ರಘುಪತಿ ಭಟ್

Advertisements

ಉಡುಪಿ: ಷರಿಯತ್ ಪ್ರಕಾರ ಶಿಕ್ಷೆ ನೀಡಿದರೆ ಹಿಜಬ್ ಧರಿಸಲು ಅವಕಾಶ ಕೊಡಬಹುದು ಎಂದು ಶಾಸಕ ರಘುಪತಿ ಭಟ್ ಕಿಡಿಕಾರಿದರು.

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲಾ ಬಿಜೆಪಿಯಿಂದ ಕೊಲೆ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ನಾನು ಸಹ ಉಗ್ರ ಭಾಷಣ ಮಾಡಿದ್ದೇನೆ. ಕಠೋರ ಮುಸ್ಲಿಮರು ಷರಿಯತ್ ಕಾನೂನು ಪಾಲಿಸಲು ತಯಾರು ಇರಲಿ. ಹರ್ಷನನ್ನು ಕೊಂದವರನ್ನು ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಲು ಅವಕಾಶ ಕೊಡಬೇಕು. ಕೊಲೆಗಡುಕರಿಗೆ ಷರಿಯತ್ ಕಾನೂನು ಪ್ರಕಾರ ಶಿಕ್ಷೆ ನೀಡುತ್ತೀರಾ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ:  ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

ಷರಿಯತ್ ಪ್ರಕಾರ ಶಿಕ್ಷೆ ನೀಡಿದರೆ ಹಿಜಬ್ ಧರಿಸಲು ಅವಕಾಶ ಕೊಡಬಹುದು. ಕಠಿಣ ಶಿಕ್ಷೆ ಬೇಡ ತರಗತಿಯಲ್ಲಿ ಹಿಜಬ್ ಬೇಕು ಎಂದರೆ ಅದು ಆಗೂದಿಲ್ಲ. ಭಾರತ ದೇಶದ ಗಾಳಿ ನೀರು ಅನ್ನ ತಿನ್ನುತ್ತಿದ್ದೀರಿ. ಕಾಂಗ್ರೆಸ್ ಪಕ್ಷ ಪಲಾಯನ ಮಾಡಬೇಡಿ, ನಿಮ್ಮ ನಿಲುವು ಸ್ಪಷ್ಟಪಡಿಸಿ. ಹಿಜಬ್ ವಿಚಾರದ ನಿಲುವೇನು? ಹರ್ಷ ಕೊಲೆಯಲ್ಲಿ ನಿಲುವೇನು? ಎಂದು ಪ್ರಶ್ನೆ ಕೇಳಿದರು.

ದುಬೈ ಸೌದಿಗಳಲ್ಲಿ ಷರಿಯತ್ ಕಾನೂನು ಇದ್ದರೂ ಆಧುನಿಕತೆಯನ್ನು ಒಪ್ಪಿಕೊಳ್ಳಲಾಗುತ್ತಿದೆ. ಹಿಂದೂಗಳ ಕೆಲ ಪದ್ಧತಿ ಕಾಲ-ಕಾಲಕ್ಕೆ ಬದಲಾವಣೆಯಾಗಿದೆ. ನಮ್ಮ ವಿದ್ವಾಂಸರು ಸತಿ ಸಹಗಮನ, ಬಾಲ್ಯವಿವಾಹ, ಅಸ್ಪೃಶ್ಯತೆ ಅಸಮಾನತೆಯನ್ನು ತೊಡೆದುಹಾಕಿದ್ದಾರೆ. ಷರಿಯತ್ ಕಾನೂನು ಒಪ್ಪುವುದಾದರೆ ಎಲ್ಲವನ್ನೂ ಮುಸ್ಲೀಮರಿಗೆ ಕಡ್ಡಾಯ ಮಾಡಿ ಎಂದು ಮನವಿ ಮಾಡಿದರು.

ನಾವು ಭಾರತದ ಸಂವಿಧಾನ ಒಪ್ಪುವವರು. ಸಾಕಷ್ಟು ಒಳ್ಳೆಯ ಮುಸ್ಲಿಮರು ಸಂವಿಧಾನ ಒಪ್ಪುತ್ತಾರೆ. ಕ್ಲಾಸ್ ರೂಂನಲ್ಲಿ ಹಿಜಬ್ ಬೇಕು ಎನ್ನುವವರಿಗೆ ಷರಿಯತ್ ಕಾನೂನು ಜಾರಿಗೆ ತನ್ನಿ. ಕೊಲೆ, ಅತ್ಯಾಚಾರ, ಭಯೋತ್ಪಾದನೆ ಮಾಡಿದಾಗ ಶರಿಯತ್ ಬೇಡ್ವಾ? ಕಠೋರ ಮುಸ್ಲಿಮರು ಈಗಲೇ ಹೇಳಿಕೆಯನ್ನು ನೀಡಬೇಕು. ಅಪರಾಧ ಮಾಡಿದಾಗ ಭಾರತದ ಸಂವಿಧಾನ ಸುಪ್ರೀಂ ಕೋರ್ಟ್ ನೆನಪಾಗುತ್ತದೆ. ಕಾಲೇಜಿನ, ತರಗತಿಯ ಶಿಸ್ತು ಪಾಲಿಸುವ ಮುಸಲ್ಮಾನರಿಗೆ ನಾನು ಈ ಮಾತನ್ನು ಹೇಳುತ್ತಿಲ್ಲ ಎಂದು ಸಿಡಿದರು. ಇದನ್ನೂ ಓದಿ: ಹರ್ಷನ ಕೊಲೆಗೆ ಹಂತಕರು ಸ್ವತಃ ಕುಳಿತು ಮಚ್ಚು ರೆಡಿ ಮಾಡಿಸಿದ್ರು!

Leave a Reply

Your email address will not be published.

Back to top button