ಕೋಲ್ಕತ್ತಾ: ಬಂಗಾಲಿ ಸಿನಿಮಾ ನಿರ್ದೇಶಕರೊಬ್ಬರು ಧೋತಿ ಧರಿಸಿದ್ದ ಕಾರಣ ಮಾಲ್ ಸಿಬ್ಬಂದಿ ಪ್ರವೇಶ ಕಲ್ಪಿಸಿದೇ ಉದ್ಧಟತನ ತೋರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ನಿರ್ದೇಶಕ ಆಶೀಶ್ ಅವಿಕುಂತ್ ಶನಿವಾರ ಸಂಜೆ ನಗರದ ಕ್ವಿಸ್ಟ್ ಮಾಲ್‍ಗೆ ತೆರಳಿದ್ದರು. ಈ ವೇಳೆ ಮಾಲ್ ಸಿಬ್ಬಂದಿ ಆಶೀಶ್ ಅವರಿಗೆ ಪ್ರವೇಶ ಕೊಡದೇ ಸತಾಯಿಸಿದ್ದಾರೆ. ಮಾಲ್ ಒಳಗಡೆ ಧೋತಿ ಮತ್ತು ಲುಂಗಿ ಧರಿಸಿದ ವ್ಯಕ್ತಿಗಳಿಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ. ಇದನ್ನು ವಿರೋಧಿಸಿ ಮಾಲ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದು, ಆಶೀಶ್ ಮಾಲ್ ಸಿಬ್ಬಂದಿಯೊಂದಿಗೆ ಇಂಗ್ಲಿಷ್ ಮಾತನಾಡಿದಾಗ ಅವ್ರಿಗೆ ಪ್ರವೇಶ ಕಲ್ಪಿಸಲಾಗಿದೆ.
Advertisement
Advertisement
ಆಶೀಶ್ ಈ ಘಟನೆಯನ್ನು ಖಂಡಿಸಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು, ಮಾಲ್‍ಗಳ ಪ್ರವೇಶಕ್ಕೆ ನಿರಾಕರಿಸುವುದು ಇದೇ ಮೊದಲೇನಲ್ಲ. ಆದರೆ ಮೊಟ್ಟ ಮೊದಲ ಬಾರಿಗೆ ಧೋತಿ ಧರಿಸಿ ಬಂದ ಕಾರಣ ನೀಡಿ ಪ್ರವೇಶ ನಿರಾಕರಿಸಿದ್ದಾರೆ. ನಾನು ಕಳೆದ 26 ವರ್ಷಗಳಿಂದಲೂ ಧೋತಿ ಧರಿಸುತ್ತಾ ಬಂದಿದ್ದೇನೆ. ಭದ್ರತೆಯ ಕಾರಣ ನೀಡಿ, ಧೋತಿ ಮತ್ತು ಲುಂಗಿ ಧರಿಸಿದ್ದವರನ್ನು ಒಳಗಡೆ ಬಿಡಲ್ಲ ಎಂದು ಹೇಳಿದ್ದಾರೆ. ನಂತರ ನಾನು ಇಂಗ್ಲಿಷ್ ನಲ್ಲಿ ಮಾತನಾಡುವುದನ್ನು ಕಂಡ ಸಿಬ್ಬಂದಿ ಮಾಲ್‍ಗೆ ಪ್ರವೇಶ ನೀಡಿದರು. ಆದರೆ ಈ ಕೃತ್ಯವನ್ನು ಪ್ರತಿಭಟಿಸುವ ಸಲುವಾಗಿ ಮಾಲ್ ಅನ್ನು ಪ್ರವೇಶಿಸದೆ ಹಿಂದಿರುಗಿದೆ ಎಂದು ಹೇಳಿಕೊಂಡಿದ್ದಾರೆ.
Advertisement
Advertisement
ಇದು ಹೊಸ ರೀತಿಯ ನಿಯಮವಾಗಿದ್ದು, ಖಾಸಗಿ ಹೋಟೆಲ್ ಹಾಗೂ ಕ್ಲಬ್‍ಗಳು ಧರಿಸುವ ಬಟ್ಟೆ ಕುರಿತು ಆಕ್ಷೇಪಿಸಿ ಪ್ರವೇಶ ನಿರಾಕರಿಸಿದ್ದು ವರ್ಣಬೇಧ ಮತ್ತು ಭಾರತೀಯ ಸಂಸ್ಕೃತಿ ಬಗೆಗಿನ ಉದಾಸೀನವನ್ನು ತೋರಿಸುತ್ತದೆ ಎಂದು ಹಲವಾರು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗಿದ್ದು. ಪೋಸ್ಟ್ ಕುರಿತು ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ ಹಾಗು ಮಾಲ್‍ನ ಮ್ಯಾನೇಜ್‍ಮೆಂಟ್ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿವೆ.
https://www.youtube.com/watch?v=JfXmZujzUJk