ನವದೆಹಲಿ: ಉಕ್ರೇನ್ ಮೇಲಿನ ರಷ್ಯಾ ಯುದ್ಧ ಭಾರತ ಆರ್ಥಿಕತೆ ಮೇಲೆಯೂ ಭಾರೀ ಪರಿಣಾಮ ಬೀರಲು ಶುರು ಮಾಡಿದೆ. ಅಗತ್ಯವಸ್ತುಗಳ ಬೆಲೆಗಳು ಮತ್ತೆ ಗಗನಮುಖಿಯಾಗತೊಡಗಿವೆ. ದೇಶದಲ್ಲಿ ಖಾದ್ಯ ತೈಲಗಳ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರುತ್ತಿವೆ.
ಒಂದು ವಾರದೊಳಗೆ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆ ಬೆಲೆ ಒಂದೇ ಸಾರಿ 40 ರೂ. ಹೆಚ್ಚಿದೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂಬ ಆತಂಕವನ್ನು ವ್ಯಾಪಾರಿಗಳು ಹೊರಹಾಕಿದ್ದಾರೆ. ಆದ್ರೇ ಕೇಂದ್ರ ಮಾತ್ರ ಆ ರೀತಿ ಏನು ಆಗುವುದಿಲ್ಲ ಹೇಳುತ್ತಿದೆ. ಇದಷ್ಟೇ ಅಲ್ಲ, ಗೋಧಿ, ಬೆಳೆ, ಕಾಳುಗಳ ಬೆಲೆಯೂ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ
Advertisement
Advertisement
ಚಿನ್ನ, ಬೆಳ್ಳಿ, ಸಿಮೆಂಟ್, ಕಬ್ಬಿಣದ ಬೆಲೆಯೂ ಹಿಗ್ಗಾಮುಗ್ಗಾ ಹೆಚ್ಚುತ್ತಿದೆ. ಇನ್ನೆರಡು ದಿನಗಳಲ್ಲಿ ಪೆಟ್ರೊಲ್, ಡೀಸೆಲ್ ಬೆಲೆಯೂ ದುಬಾರಿ ಆಗಲಿದ್ದು, ಆಗ ಇನ್ನೆಷ್ಟು ಹೆಚ್ಚಾಗಲಿದೆ? ಸೆಮಿ ಕಂಡಕ್ಟರ್‌ಗಳಿಗೆ ಬಳಸುವ ಲೋಹದ ಕೊರತೆ ಎದುರಾಗ್ತಿರೋದ್ರಿಂದ ಮುಂದಿನ ದಿನಗಳಲ್ಲಿ ಮೊಬೈಲ್ ಫೋನ್, ವಾಹನ, ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ದುಬಾರಿ ಆಗಲಿವೆ.
Advertisement
ಕಚ್ಚಾ ತೈಲ ಬೆಲೆ ನಿರಂತರವಾಗಿ ಹೆಚ್ಚುತ್ತಿರುವ ಕಾರಣ ಹಣದುಬ್ಬರ ಪ್ರಮಾಣವೂ ಹೆಚ್ಚಾಗುವ ಆತಂಕ ಎದುರಾಗಿದೆ.
Advertisement
ಯುದ್ಧದ ಎಫೆಕ್ಟ್: ಏನೇನು ದುಬಾರಿ?
* ಸೂರ್ಯಕಾತಿ ಎಣ್ಣೆ(ಲೀ) – 140-180 ರೂ.
* ಶೇಂಗಾ ಎಣ್ಣೆ (ಲೀ) – 160-190 ರೂ.
* ಪೆಟ್ರೋಲ್(ಲೀ) – ಮಾರ್ಚ್ 16ರೊಳಗೆ 15 ರೂ. ಹೆಚ್ಚಳ ಸಾಧ್ಯತೆ
* ಡೀಸೆಲ್ (ಲೀ) – ಮಾರ್ಚ್ 16ರೊಳಗೆ 15 ರೂ. ಹೆಚ್ಚಳ ಸಾಧ್ಯತೆ
* ಬಂಗಾರ (24ಕೆ) (10 ಗ್ರಾಂ) – 53,950 ರೂ
* ಬೆಳ್ಳಿ (1ಕೆಜಿ)- 70,500 ರೂ.
* ಗೋಧಿ – ಶೇ.55ರಷ್ಟು ಹೆಚ್ಚಳ ಸಾಧ್ಯತೆ
(2,000 ರೂ. -2,100 ರೂ. ಆಜುಬಾಜಿನಲ್ಲಿದ್ದ ಕ್ವಿಂಟಾಲ್ ಗೋಧಿ ಈಗಾಗಲೇ 2500 ರೂ. ಆಗಿದೆ. ಅಮೆರಿಕಾದಲ್ಲಂತೂ 14 ವರ್ಷಗಳ ಗರಿಷ್ಠ ತಲುಪಿದೆ.)
* ಸಿಮೆಂಟ್ ಬ್ಯಾಗ್ – 30-50 ರೂ. ಹೆಚ್ಚಳ
* ಕಬ್ಬಿಣ (ಟನ್) – 10ಸಾವಿರ ರೂ. ಹೆಚ್ಚಳ
* ಮೊಬೈಲ್
* ವಾಹನ
* ಎಲೆಕ್ಟ್ರಾನಿಕ್ ಗೂಡ್ಸ್