– ಭಯೋತ್ಪಾದಕ ಮುಸ್ಲಿಮರು ರಾಜ್ಯದಲ್ಲಿ ಮಗುವಿನಂತೆ ಮಲಗಬಹುದು; ಅಶೋಕ್ ಲೇವಡಿ
– ನವೆಂಬರ್ 7ರಂದು ಶ್ರೀರಂಗಪಟ್ಟಣದಲ್ಲಿ ಬೃಹತ್ ಪ್ರತಿಭಟನೆ
ಬೆಂಗಳೂರು: ವಕ್ಫ್ ಆಸ್ತಿ ವಿವಾದಕ್ಕೆ (Waqf Property Controversy) ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯು ಸೋಮವಾರ ರಾಜ್ಯಾದಾದ್ಯಂತ ಪ್ರತಿಭಟನೆ (BJP Protest) ನಡೆಸುತ್ತಿದೆ. ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಪ್ರತಿಭಟನೆಗಿಳಿದಿದ್ದಾರೆ.
ಬೆಂಗಳೂರಿನಲ್ಲೂ (Bengaluru) ಕೆ.ಆರ್ ಪುರಂ ಬಿಬಿಎಂಪಿ ಕಚೇರಿ ಎದುರು ವಿಪಕ್ಷ ನಾಯಕ ಆರ್. ಅಶೋಕ್ (R Ashoka) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಾಜಿ ಸಚಿವರಾದ ಬೈರತಿ ಬಸವರಾಜು, ಸಪ್ತಗಿರಿ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಸರ್ಕಾರದ (Congress Govt) ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಮರಿಗೆ ಉರುಳಿದ ಬಸ್ – ಕನಿಷ್ಠ 20 ಮಂದಿ ದಾರುಣ ಸಾವು
ಇದೇ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆರ್.ಅಶೋಕ್, ಲವ್ ಜಿಹಾದ್ ಮಾಡಿ ಹಿಂದೂ ಹೆಣ್ಮಕ್ಕಳನ್ನ ಮತಾಂತರ ಮಾಡಿಯಾಯ್ತು. ಈಗ ಲ್ಯಾಂಡ್ ಜಿಹಾದ್ ಮೂಲಕ ರೈತರ ಜಮೀನನ್ನು ಕನ್ವರ್ಷನ್ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ - ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು
ರಾಜ್ಯ ಸರ್ಕಾರ ಅನ್ನದಾತರ ತಲೆ ಮೇಲೆ ಚಪ್ಪಡಿಕಲ್ಲು ಎಳೆದಿದೆ. ಜಮೀರ್ ರೈತರ ಜಮೀನು ಕಬಳಿಕೆಗೆ ಮುಂದಾಗಿದ್ದಾರೆ. ರೈತರ ಜಮೀನು ಕಬಳಿಸಲು ಹುನ್ನಾರ ನಡೆದಿದೆ. 1974 ರಲ್ಲಿ ಆವತ್ತಿನ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ, ಇದು ರದ್ದಾಗಬೇಕು. ಈ ನೋಟಿಫಿಕೇಷನ್ ಮುಸಲ್ಮಾನರ ಓಲೈಕೆಗಾಗಿ ಮಾಡಲಾಗಿದೆ. ಸಿದ್ದರಾಮಯ್ಯ ಎಲ್ಲ ಪ್ರಕ್ರಿಯೆ ಸ್ಥಗಿತ ಮಾಡಿದ್ದೀವಿ ಅಂದಿದ್ದಾರೆ. ಸಿದ್ದರಾಮಯ್ಯ ಈಗ ಟೋಪಿ ತೆಗೆದಿದ್ದಾರೆ, ಮುಂದೆ ಮತ್ತೆ ಮಸೀದಿಗೆ ಹೋಗಿ ಟೋಪಿ ಹಾಕಿದ್ರೆ ನಂಬೋದು ಹೇಗೆ? ಇದು ವಕ್ಫ್ ಬೋರ್ಡ್ ಆಗಿ ಉಳಿದಿಲ್ಲ, ಸಾಬರ ಬೋರ್ಡ್ ಆಗಿದೆ. ಮೊಹಮದ್ ಘೋರಿ, ಆದಿಲ್ ಷಾಹಿ ಬೋರ್ಡ್ ಆಗಿದೆ. ಎಲ್ಲೆಲ್ಲೂ ರೈತರ ಜಮೀನಿಗೆ ನೊಟೀಸ್ ಕೊಟ್ಟಿದ್ದಾರೆ. ರೈತರ ಭೂಮಿ, ಶಾಲೆ, ದೇವಸ್ಥಾನ, ಮಠಗಳನ್ನು ವಕ್ಫ್ ಜಾಗ ಅಂತ ಮಾಡಿದ್ದಾರೆ. ಇದು ತುಘಲಕ್ ಸರ್ಕಾರ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದರು.
ಈ ಭಯೋತ್ಪಾದಕ, ಮತಾಂಧ ಮುಸ್ಲಿಮರು ರಾಜ್ಯದಲ್ಲಿ ಮಗುವಿನಂತೆ ಮಲಗಬಹುದು, ಯಾಕಂದ್ರೆ ಈ ಸರ್ಕಾರ ಅವರ ಪರ ಇದೆ. ʻಸ್ಲೀಪ್ ಲೈಕ್ ಎ ಬೇಬಿʼ ಬನ್ನಿ ಅಂತ ಪಾಕಿಸ್ತಾನದವರಿಗೆ ಸಿದ್ದರಾಮಯ್ಯ ಕರೀತಿದ್ದಾರೆ ಎಂದು ಕುಟಕಿದರು. ಇದನ್ನೂ ಓದಿ: ಬಿಜೆಪಿಯವರು ಬಡವರ ವಿರೋಧಿಗಳು – ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ: ರಾಮಲಿಂಗಾರೆಡ್ಡಿ
ನವೆಂಬರ್ 7ರಂದು ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ:
ಸಿದ್ದರಾಮಯ್ಯ ಪದೇ ಪದೇ ವೋಟ್ ರಾಜಕೀಯಕ್ಕಾಗಿ ಕರ್ನಾಟಕವನ್ನ ಹಾಳು ಮಾಡ್ತಿದ್ದಾರೆ. ಇವರನ್ನು ಯಾರೂ ನಂಬಲ್ಲ. ನಾನು ಶ್ರೀರಂಗಪಟ್ಟಣ ದಲ್ಲಿ ನವೆಂಬರ್ 7 ರಂದು ದೊಡ್ಡ ಪ್ರತಿಭಟನೆ ಮಾಡ್ತೇನೆ. ಶ್ರೀರಂಗಪಟ್ಟಣದಲ್ಲಿ ಶಾಲೆಯ ಆಸ್ತಿಯನ್ನೇ ಆಸ್ತಿ ಅಂತಿದ್ದಾರೆ. ಸಿದ್ದರಾಮಯ್ಯ ಹಣೆಗೆ ಮುಡಾ ಹಗರಣ ನಂತರ ಬೊಟ್ಟು ಬಂದಿದೆ. ಈ ಬೊಟ್ಟು ಯಾವಾಗ ತೆಗೀತಾರೋ ಗೊತ್ತಿಲ್ಲ. ಮುಸ್ಲಿಂ ಟೋಪಿ ಯಾವಾಗ ಹಾಕ್ತಾರೆ ಯಾವಾಗ ತೆಗೀತಾರೆ ಅಂತ ಗೊತ್ತಾಗಲ್ಲ. ಒಟ್ಟಿಗೆ ರಾಜ್ಯದಲ್ಲಿರುವ ಎಲ್ಲ ಶಾಲೆ, ದೇವಸ್ಥಾನಗಳನ್ನು ಸಾಬರ ಬೋರ್ಡಿಗೆ ಬರೆದುಕೊಟ್ಬಿಡಿ ಎಂದು ತಿರುಗೇಟು ನೀಡಿದರು.