ಬೆಂಗಳೂರು: ವಕ್ಫ್ ನೊಟೀಸ್ (Waqf Notice) ವಾಪಸ್‌ಗೆ ಸಿಎಂ ಆದೇಶ ನೀಡಿದ ನಂತರವೂ, ಬಿಜೆಪಿ ಇಂದು (ನ.4) ರಾಜ್ಯಾದ್ಯಂತ ಪ್ರತಿಭಟನೆಗೆ (BJP Protest) ಮುಂದಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಜಿಲ್ಲೆಗಳಲ್ಲಿ ಹೋರಾಟಕ್ಕೆ ಕೇಸರಿ ಪಡೆ ಮುಂದಾಗಿದೆ. ಇದನ್ನು ಸಿಎಂ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಓಲೈಕೆಗಾಗಿ ಜಮೀನು ಕಬಳಿಕೆ, ಇದರ ವಿರುದ್ಧ ಬಿಜೆಪಿ ಬೃಹತ್ ಹೋರಾಟ: ಅಶೋಕ್
Advertisement
ಸರ್ಕಾರದ ಸೂಚನೆ ನಂತರವೂ ಬಿಜೆಪಿ ಪ್ರತಿಭಟನೆಗೆ ಮುಂದಾಗಿರೋದಕ್ಕೆ ರಾಜಕೀಯ ಲಾಭದ ದುರುದ್ದೇಶ ಇದೆ. ರೈತರ ಹಿತಾಸಕ್ತಿ ರಕ್ಷಣೆಯ ಸದುದ್ದೇಶ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ರಾಜ್ಯದ ಜನರನ್ನು ಸಿಎಂ ಕೋರಿದ್ದಾರೆ. ಇನ್ನೂ ಬೊಮ್ಮಾಯಿ ಸಿಎಂ ಆಗಿದ್ದಾಗ ವಕ್ಫ್ ಪರ ನೀಡಿದ್ದ ಹೇಳಿಕೆಯನ್ನು ಹಂಚಿಕೊಂಡಿರೋ ಕಾಂಗ್ರೆಸ್, ಬಿಜೆಪಿಗೆ ಟಕ್ಕರ್ ಕೊಟ್ಟಿದೆ. ಇದಕ್ಕೆ ಬಿಜೆಪಿಯವರು ಏನಂತಾರೆ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಹರಿಹರದ ಗುಡ್ಡದಲ್ಲಿ ಝಂಡಾ ಕಟ್ಟೆ ಮಾಡಿ ಶಸ್ತ್ರಾಸ್ತ್ರ ಸಂಗ್ರಹ: ರೇಣುಕಾಚಾರ್ಯ ಆರೋಪ
Advertisement
ಬಿಜೆಪಿ ಹೋರಾಟದ ಬೇಡಿಕೆ ಏನು?
* 1974ರಲ್ಲಿ ಸರ್ಕಾರ ಹೊರಡಿಸಿದ್ದ ಗೆಜೆಟ್ ನೊಟೀಫಿಕೇಶನ್ ರದ್ದು ಮಾಡಬೇಕು.
* ಈಗ ರೈತರಿಗೆ ಕೊಟ್ಟಿರೋ ನೊಟೀಸ್ ವಾಪಸ್ ಪಡೆಯಬೇಕು.
* ಇನ್ನು ಮುಂದೆ ಯಾವುದೇ ರೈತರಿಗೆ ನೊಟೀಸ್ ಕೊಡಬಾರದು.
* ರೈತರ ಜಮೀನಿನಲ್ಲಿ ವಕ್ಫ್ ಆಸ್ತಿ ಅಂತ ನಮೂದು ಆಗಿರೋ ದಾಖಲಾತಿ ರೈತರ ಹೆಸರಿಗೆ ಮಾಡಿಕೊಡಬೇಕು.
* ನೊಟೀಸ್ ಕೊಟ್ಟ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಆಗಬೇಕು.
* ರೈತರಿಗೆ ವಿರೋಧ ಆಗಿರೋ, ವಕ್ಫ್ ನೊಟೀಸ್ ಕೊಡಲು ಪ್ರೇರೇಪಿಸಿದ ಸಚಿವ ಜಮೀರ್ ತಲೆ ದಂಡ ಆಗಬೇಕು.