ವಿಜಯಪುರ ಆಯ್ತು ಈಗ ಯಾದಗಿರಿಯ 1440 ರೈತರಿಗೆ ವಕ್ಫ್‌ ಬಿಗ್ ಶಾಕ್!

Public TV
2 Min Read
Waqf Eyes 1440 Farmers Agri Land In Yadagiri Farmers outraged as Congress led state government misuses Waqf Laws to Grab their land 3

– ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ
– ಜಾಗದ ಬಳಿ ಮಸೀದಿ, ದರ್ಗಾ ಇಲ್ಲದೇ ಇದ್ದರೂ ವಕ್ಫ್‌ ಬೋರ್ಡ್‌ಗೆ ಸೇರ್ಪಡೆ

ಯಾದಗಿರಿ: ವಿಜಯಪುರದ ಬಳಿಕ ಯಾದಗಿರಿ (Yadagiri) ಜಿಲ್ಲೆಯ ಸಾವಿರಕ್ಕೂ ಹೆಚ್ಚು ರೈತರಿಗೆ ವಕ್ಫ್‌ ಬೋರ್ಡ್‌ (Waqf Board) ಶಾಕ್‌ ನೀಡಿದೆ. ರೈತರ ಭೂಮಿ (Farmers Land) ಪಹಣಿ ಕಾಲಂ ನಂಬರ್ 11 ರ ಮೇಲೆ ವಕ್ಪ್ ಎಂದು ನಮೂದಾಗಿದ್ದು ಸಾವಿರಾರು ಎಕರೆ ಕೃಷಿ ಭೂಮಿ ವಕ್ಫ್ ಹೆಸರಿಗೆ ವರ್ಗಾವಣೆಯಾಗಿದೆ. ಇದರಿಂದ ರೈತಾಪಿ ವರ್ಗ ಅಕ್ಷರಶಃ ಬೀದಿಗೆ ಬಂದಿದ್ದು ವಕ್ಪ್ ಕಾಯ್ದೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ವಿಜಯಪುರ ಜಿಲ್ಲೆ ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್

 

ಜಿಲ್ಲೆಯ 1440 ರೈತರ ಕೃಷಿ ಭೂಮಿ ವಕ್ಫ್‌ ಬೋರ್ಡ್‌ಗೆ ವರ್ಗಾವಣೆಯಾಗಿದೆ. ಈ ಹಿಂದೆ ವಂಶಪಾರಂಪರಿಕವಾಗಿ ರೈತರು ಉಳುಮೆ ಮಾಡುತ್ತಿದ್ದರು. ಹಾಗೆ ಅವರ ವಂಶದವರ ಹೆಸರೇ ಪಹಣಿಯಲ್ಲಿ ಇತ್ತು. 2018 ರಲ್ಲಿ ಕೊಂಗಡಿ ಗ್ರಾಮದ ರೈತ ಸುನೀಲ್ ಹವಾಲ್ದಾರ್ ತನ್ನ ತಂದೆ ಅಂಬಣ್ಣನ ಹೆಸರಿನಿಂದ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಆಗಲೂ ಸಹ ಪಹಣಿಯಲ್ಲಿ ಎಲ್ಲಿಯೂ ವಕ್ಫ್‌ ಎಂದು ಇರಲಿಲ್ಲ. ಕೆಲ ದಿನಗಳ ಬಳಿಕ ಕೊಂಗಡಿ ಗ್ರಾಮದ ಕೆಲ ಜಮೀನನ್ನು ರೈಲ್ವೆ ಇಲಾಖೆ ಹಳಿ ಕಾಮಗಾರಿಗಾಗಿ ಸ್ವಾಧೀನ ಪಡಿಸಿಕೊಂಡಿತು. ಈ ವೇಳೆ  ಪರಿಹಾರದ ಹಣ ನೀಡಲು ರೈತರು ಪಹಣಿ ಸೇರಿ ಅಗತ್ಯ ದಾಖಲೆ ಸಲ್ಲಿಸಿದ್ದರು. ಆಗ ರೈತರ ಪಹಣಿಯಲ್ಲಿನ 11 ನಂಬರ್ ಕಾಲಂನಲ್ಲಿ ವಕ್ಫ್‌ ಎಂದು ನಮೂದಾಗಿರುವ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೊನ್ನೆ 11 ಸಾವಿರ ಅಂದಿದ್ರು, ಈಗ 15 ಸಾವಿರ ಎಕ್ರೆಗೆ ಏರಿಕೆಯಾಗಿದೆ: ಜಮೀರ್ ವಿರುದ್ಧ
ಯತ್ನಾಳ್ ಕಿಡಿ

ರೈತರು ಜಮೀನು ಬಳಿ ಯಾವುದೇ ದರ್ಗಾ, ಮಸೀದಿಗಳು ಇಲ್ಲದೇ ಇದ್ದರೂ ವಕ್ಫ್‌ ಬೋರ್ಡ್‌ಗೆ ವರ್ಗಾವಣೆಯಾಗಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ. ರೈಲ್ವೇ ಕಾಮಗಾರಿ ಪರಿಹಾರ ಹಣ ಪಡೆಯಲು ಮುಂದಾದಾಗ 2020 ರಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

Waqf Eyes 1440 Farmers Agri Land In Yadagiri Farmers outraged as Congress led state government misuses Waqf Laws to Grab their land 2

ಈಗ ಗ್ರಾಮದ ರೈತರೆಲ್ಲರೂ ಕೋರ್ಟ್ ಮೆಟ್ಟಿಲೇರಿದ್ದರಿಂದ ಸುಮಾರು 200 ಕೋಟಿ ರೂ.ಗೂ ಅಧಿಕ ಪರಿಹಾರ ರೈತರಿಗೆ ಸಿಗದೇ ಅಲ್ಲಿಯೇ ನಿಂತಿದೆ. ಪ್ರಕರಣ ಕೋರ್ಟ್‌ನಲ್ಲಿರುವ ಕಾರಣ ಬೆಳೆ ಪರಿಹಾರ, ಬೆಳೆ ಸಾಲವೂ ಸಿಗದೇ ಅನ್ನದಾತರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.

ಸರ್ಕಾರ ಹಾಗೂ ವಕ್ಪ್ ಕಾಯ್ದೆ ವಿರುದ್ಧ ಅನ್ನದಾತರು ಈಗ ಆಕ್ರೋಶ ಹೊರ ಹಾಕುತ್ತಿದ್ದು ಕೂಡಲೇ ರೈತರ ಪಹಣಿಯಲ್ಲಿನ ವಕ್ಫ್‌ ಹೆಸರನ್ನು ಕೈ ಬೀಡಬೇಕು ಇಲ್ಲದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಆಗ್ರಹಿಸಿದ್ದಾರೆ.

 

Share This Article