ನವದೆಹಲಿ: 2014ರಲ್ಲಿ ಬಿಜೆಪಿ ಸರ್ಕಾರ (BJP Government) ಅಧಿಕಾರಕ್ಕೆ ಬಾರದೇ ಇದ್ದರೆ ಸಂಸತ್ತು, ವಿಮಾನ ನಿಲ್ದಾಣವನ್ನು (Airtport) ಕಾಂಗ್ರೆಸ್ ವಕ್ಫ್‌ಗೆ ನೀಡುತ್ತಿತ್ತು ಎಂದು ಕೇಂದ್ರ ಸಂಸದೀಯ ಖಾತೆ ಮತ್ತು ಅಲ್ಪಸಂಖ್ಯಾತ ಖಾತೆಯ ಸಚಿವ ಕಿರಣ್ ರಿಜಿಜು (Kiren Rijiju) ಹೇಳಿದರು.
ವಕ್ಫ್ ತಿದ್ದುಪಡಿ ಮಸೂದೆಯನ್ನು (Waqf Amendment Bill) ಲೋಕಸಭೆಯಲ್ಲಿ ಮಂಡಿಸಿದ ಬಳಿಕ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರವು ಶಾಸನಕ್ಕೆ ಮಾಡಿದ ಬದಲಾವಣೆಗಳು ಇತರ ಕಾನೂನುಗಳಿಗಿಂತ ಹೆಚ್ಚಿನ ಪರಿಣಾಮವನ್ನು ನೀಡಿದ್ದರಿಂದ ಹೊಸ ತಿದ್ದುಪಡಿಗಳು ಅಗತ್ಯವಾಗಿವೆ ಎಂದು ಸಮರ್ಥಿಸಿಕೊಂಡರು.
- Advertisement -
ಕಾಂಗ್ರೆಸ್ ಸರ್ಕಾರ 123 ಆಸ್ತಿಗಳನ್ನು ಡಿನೋಟಿಫೈ ಮಾಡಿ ವಕ್ಫ್ ಮಂಡಳಿಗೆ ಹಸ್ತಾಂತರಿಸಿತ್ತು. ನಾವು ಈ ತಿದ್ದುಪಡಿಯನ್ನು ಪರಿಚಯಿಸದಿದ್ದರೆ, ಸಂಸತ್ತಿನ ಕಟ್ಟಡವನ್ನು ಸಹ ವಕ್ಫ್ ಆಸ್ತಿ ಎಂದು ಹೇಳಿಕೊಳ್ಳಬಹುದಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ
- Advertisement -
- Advertisement -
ಈ ಮಸೂದೆಯು ಬಡ ಮುಸ್ಲಿಮರು ಮತ್ತು ಮಹಿಳೆಯರ ಹಿತಾಸಕ್ತಿಗಾಗಿ ಮತ್ತು ಆಸ್ತಿಗಳನ್ನು ನಿರ್ವಹಿಸುವಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. ವಿರೋಧ ಪಕ್ಷಗಳು ಹೇಳುತ್ತಿರುವಂತೆ ಮುಸ್ಲಿಂ ಸಮುದಾಯದ ಭೂಮಿ ಅಥವಾ ಮಸೀದಿಗಳನ್ನು ಕಿತ್ತುಕೊಳ್ಳುವ ಗುರಿಯನ್ನು ಮಸೂದೆ ಹೊಂದಿಲ್ಲ. ಆ ಜಾಗಗಳನ್ನು ರಕ್ಷಿಸುತ್ತದೆ ಎಂದು ಹೇಳಿದರು.
- Advertisement -
ರಿಜಿಜು ವಿರುದ್ಧ ಕಾಂಗ್ರೆಸ್ ಆರೋಪವನ್ನು ಮುಂದಿಟ್ಟ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಈ ಶಾಸನವು ಸಂವಿಧಾನವನ್ನು ದುರ್ಬಲಗೊಳಿಸುತ್ತದೆ, ಅಲ್ಪಸಂಖ್ಯಾತ ಸಮುದಾಯವನ್ನು ಮಾನಹಾನಿಗೊಳಿಸುತ್ತದೆ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಮತ್ತು ಸಮಾಜವನ್ನು ವಿಭಜಿಸುತ್ತದೆ ಎಂದು ದೂರಿದರು. ಇದನ್ನೂ ಓದಿ: ವಕ್ಫ್ ಮಸೂದೆಯ ಪರ ಮತ ಹಾಕಿ – ಸಂಸದರಿಗೆ ಕೇರಳ ಕ್ಯಾಥೋಲಿಕ್ ಬಿಷಪ್ ಸಂಘಟನೆ ಕರೆ
ಗೃಹ ಸಚಿವ ಅಮಿತ್ ಶಾ ಮಾತನಾಡಿ, ವಕ್ಫ್ ಮಸೂದೆಯ ಎಲ್ಲಾ ಅಂಶಗಳನ್ನು ಜೆಪಿಸಿಯಲ್ಲಿ ಚರ್ಚಿಸಲಾಗಿದೆ. ಈ ಹಿಂದೆ ಕಾಂಗ್ರೆಸ್ ಚರ್ಚೆ ಮಾಡದೇ ಕಾನೂನುಗಳನ್ನು ಅಂಗೀಕರಿಸಿತ್ತು. ನಮ್ಮ ಸಮಿತಿಯು ಚರ್ಚಿಸುತ್ತದೆ ಮತ್ತು ಬದಲಾವಣೆಗಳನ್ನು ಮಾಡುತ್ತದೆ ಎಂದರು.
543 ಸದಸ್ಯರ ಲೋಕಸಭೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ 293 ಸದಸ್ಯರನ್ನು ಹೊಂದಿದೆ. ಮಸೂದೆ ಅಂಗೀಕಾರಕ್ಕೆ ಪರವಾಗಿ 272 ಮತಗಳು ಬೇಕಾಗುತ್ತವೆ. ರಾಜ್ಯಸಭೆಯಲ್ಲಿ ಎನ್‌ಡಿಎ 125 ಸಂಸದರ ಬೆಂಬಲವನ್ನು ಹೊಂದಿದೆ. ರಾಜ್ಯಸಭೆಯಲ್ಲಿ ಬಹುಮತಕ್ಕೆ 118 ಸದಸ್ಯರ ಬೆಂಬಲ ಬೇಕು.