ಹಿಂದೂಗಳ ನಡುವೆ ನಮಾಜ್ – ಟೀಕೆಯ ಬಳಿಕ ಕ್ಷಮೆಯಾಚಿಸಿದ ವಕಾರ್ ಯೂನಿಸ್

Public TV
2 Min Read
waqur unis 1

ಇಸ್ಲಾಮಾಬಾದ್: ಕ್ರಿಕೆಟ್‍ನಲ್ಲಿ ಧರ್ಮವನ್ನು ಎಳೆ ತಂದು ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಮಾಜಿ ನಾಯಕ ವಕಾರ್ ಯೂನಿಸ್ ಈಗ ಕ್ಷಮೆಯಾಚಿಸಿದ್ದಾರೆ.

IND VS PAK 3

ಟಿ20 ವಿಶ್ವಕಪ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿ ಹಿಂದೂಗಳ ನಡುವೆ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ನಮಾಜ್ ಮಾಡಿರುವುದು ತುಂಬಾ ವಿಶೇಷವಾಗಿತ್ತು ಎಂದು ವಕಾರ್ ಯೂನಿಸ್ ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಈ ಬಗ್ಗೆ ವಕಾರ್ ಯೂನಿಸ್ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಪಾಕ್ ಗೆಲವು ಸಂಭ್ರಮಿಸಿದವ್ರ ವಿರುದ್ಧ ದೂರು ದಾಖಲಿಸಿದವರಿಗೆ ಉಗ್ರರ ವಾರ್ನಿಂಗ್

mohamd rizwan

ಭಾರತ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಪಾಕಿಸ್ತಾನದ ಆರಂಭಿಕ ಆಟಗಾರ ರಿಜ್ವಾನ್ ಮೈದಾನದಲ್ಲಿ ನಮಾಜ್ ಮಾಡಿದ್ದರು. ಈ ಬಗ್ಗೆ ವಕಾರ್ ಯೂನಿಸ್ ಮಾಧ್ಯಮವೊಂದರ ಚರ್ಚೆಯಲ್ಲಿ ಪಾಲ್ಗೊಂಡು, ನನಗೆ ರಿಜ್ವಾನ್ ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ತುಂಬಾ ವಿಶೇಷವಾಗಿ ಕಂಡಿತು. ಬಾಬರ್ ಮತ್ತು ರಿಜ್ವಾನ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು ಅದಲ್ಲದೆ ಹಿಂದೂಗಳು ಕೂಡಿದ್ದ ಕ್ರೀಡಾಂಗಣದಲ್ಲಿ ನಮಾಜ್ ಮಾಡಿರುವುದು ಖುಷಿ ನೀಡಿದೆ ಎಂದಿದ್ದರು. ಇದನ್ನೂ ಓದಿ: ಭಾರತದ ಮುಸಲ್ಮಾನರಿಂದಲೂ ಪಾಕಿಸ್ತಾನ ತಂಡಕ್ಕೆ ಬೆಂಬಲ: ಪಾಕ್ ಸಚಿವ

waqur unis

ವಕಾರ್ ಯೂನಿಸ್ ಅವರ ಹೇಳಿಕೆ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಮತ್ತು ಭಾರತದ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಹರ್ಷ ಬೋಗ್ಲೆ, ಆಕಾಶ್ ಚೋಪ್ರಾ ಸಹಿತ ಹಲವು ಆಟಗಾರರು ಕಿಡಿಕಾರಿದ್ದರು. ಅದಲ್ಲದೆ ಟ್ವಿಟ್ಟರ್ ಮೂಲಕ ತಿರುಗೇಟು ನೀಡಿದ್ದರು. ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಈ ರೀತಿಯ ಹೇಳಿಕೆ ಕ್ರೀಡೆಯಲ್ಲಿ ಹೇಳುವುದು ಸರಿಯಲ್ಲ. ಇದು ಜಿಹಾದಿ ಮನಸ್ಥಿತಿಯ ಮತ್ತೊಂದು ಹಂತದಂತಿದೆ ಎಂತಹ ನಾಚಿಕೆಗೇಡಿನ ಮನುಷ್ಯ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

ತಮ್ಮ ಹೇಳಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ವಕಾರ್ ಯೂನಿಸ್, ನನ್ನ ಹೇಳಿಕೆಯಿಂದ ಹಲವರಿಗೆ ನೋವಾಗಿದೆ. ಹಾಗಾಗಿ ನಾನು ಈ ಹೇಳಿಕೆ ಬಗ್ಗೆ ಕ್ಷಮೆಯಾಚಿಸುತ್ತೇನೆ. ನಾನು ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿದ್ದಲ್ಲ. ಪಾಕಿಸ್ತಾನದ ಗೆಲುವಿನ ಉತ್ಸಾಹದಲ್ಲಿ ಹೇಳಿದ್ದೇನೆ. ಇದಕ್ಕೆ ಇದೀಗ ಎಲ್ಲರ ಬಳಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

 

Share This Article