ಕೊಪ್ಪಳ: ರಾಜ್ಯಾದ್ಯಂತ ವಕ್ಫ್ ಆಸ್ತಿ ವಿವಾದ ಭುಗಿಲೆದ್ದಿರುವ ವೇಳೆ ಇದೀಗ ಕೊಪ್ಪಳ (Koppal) ಜಿಲ್ಲೆಗೂ ವಕ್ಫ್ ಆಸ್ತಿ ರಾದ್ಧಾಂತ ತಲೆದೂರಿದೆ.
ಜಿಲ್ಲೆಯಲ್ಲಿರುವ ರೈತರ ಜಮೀನುಗಳ ಪಹಣಿಯಲ್ಲಿ ನೋಟಿಸ್ ನೀಡದೆಯೇ ವಕ್ಫ್ ಆಸ್ತಿ ಎಂದು ನಮೂದಿಸಿದೆ. 2021ರಲ್ಲಿ ಹಾಗೂ 2023ರಲ್ಲಿ ಅನೇಕ ರೈತರಿಗೆ ನೋಟಿಸ್ ನೀಡದೆಯೇ ಪಹಣಿಯಲ್ಲಿರುವ 11ನೇ ಕಾಲಂನಲ್ಲಿ ವಕ್ಫ್ ಆಸ್ತಿ ಹೆಸರು ಉಲ್ಲೇಖಿಸಲಾಗಿತ್ತು. ಪ್ರಶ್ನೆ ಮಾಡಿದ್ದಕ್ಕೆ ತಮ್ಮ ಮೂಲ ದಾಖಲಾತಿ ತಂದು ಹಾಜರುಪಡಿಸುವಂತೆ ರೈತರಿಗೆ ವಕ್ಫ್ ಬೋರ್ಡ್ ತಿಳಿಸಿತ್ತು.ಇದನ್ನೂ ಓದಿ: ಮಾಜಿ ಸಚಿವೆ, ಸಂಸದರ ಜಮೀನಿನ ಮೇಲೂ ವಕ್ಫ್ ಕರಿನೆರಳು!
Advertisement
Advertisement
ಜಿಲ್ಲೆಯ ಕೊಪ್ಪಳ ನಗರ, ಕೊಪ್ಪಳ ತಾಲೂಕಿನ ಕವಲೂರು, ಹೂವಿನಾಳ ಗ್ರಾಮ, ಕುಕನೂರು, ಯಲಬುರ್ಗಾ ತಾಲೂಕಿನ ಅನೇಕ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. ವಕ್ಫ್ ಆಸ್ತಿ ವಿವಾದ ಹೆಚ್ಚಾದಂತೆ ತಮ್ಮ ಪಹಣಿಯನ್ನು ರೈತರು ಪರಿಶೀಲಿಸುತ್ತಿದ್ದಾರೆ. ಈ ವೇಳೆ ವಕ್ಫ್ ಆಸ್ತಿ ಎಂದಿರುವುದನ್ನು ಕಂಡು ರೈತರು ಶಾಕ್ ಆಗಿದ್ದಾರೆ.
Advertisement
ಇನ್ನೂ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿರುವ ಪಟ್ಟಣ ಪಂಚಾಯತ್ ಕಚೇರಿಯನ್ನು ವಕ್ಫ್ ಆಸ್ತಿ ಎಂದು ನಮೂದಿಸಿದ್ದು, ಕೊಪ್ಪಳ ವಿಭಾಗಾಧಿಕಾರಿ ಆದೇಶ ಅನ್ವಯ ಕುಕನೂರ ಉಪತಹಶೀಲ್ದಾರರಿಂದ 2019 ರಲ್ಲಿಯೇ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಉಲ್ಲೇಖಿಸಿದ್ದಾರೆ. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹೆಸರಿನಲ್ಲಿರುವ ಸರ್ವೇ ನಂಬರ್ 54 ರಲ್ಲಿರುವ 13 ಗುಂಟೆ ಜಾಗ ವಕ್ಫ್ಗೆ ಸೇರಿದೆ ಎಂದು ನಮೂದಾಗಿದೆ.ಇದನ್ನೂ ಓದಿ: ಹಾಡು ಹಾಡಿ ಬೆಳಕು ಹಂಚುವ ಮಲೆನಾಡಿಗರ ವಿಶೇಷ ದೀಪಾವಳಿ!