ಬೆಳಗಾವಿ: ಜೆಡಿಎಸ್‌ಗೆ (JDS) ಒಂದೇ ಒಂದು ಮತ ಹಾಕಬೇಡಿ. ಜೆಡಿಎಸ್‌ಗೆ ಮತ ಹಾಕಿದ್ರೆ ಅದು ಬಿಜೆಪಿಗೆ (BJP) ಮತ ಹಾಕಿದಂತೆ ಎಂದು ಜೆಡಿಎಸ್ ವಿರುದ್ಧ ಮಾಜಿ ಸಚಿವ ಜಮೀರ್ ಅಹ್ಮದ್ (Zameer Ahmed) ವಾಗ್ದಾಳಿ ನಡೆಸಿದರು.
ತಾಲೂಕಿನ ಪಂಥ ಬಾಳೇಕುಂದ್ರಿ ಗ್ರಾಮದಲ್ಲಿ ಪ್ರಜಾಧ್ವನಿ ಯಾತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಜನರಿಗೆ ಅನ್ನ ಭಾಗ್ಯ ಆಧಾರವಾಗಿದೆ. ಸಿದ್ದರಾಮಯ್ಯ ಸರ್ಕಾರ ಮಾತ್ರ ರೈತರ ಸಾಲ ಮನ್ನಾ ಮಾಡಿದ್ದರು. ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಲು ಪ್ರಿಂಟಿಂಗ್ ಮಷಿನ್ ಇಟ್ಟಿಲ್ಲ ಎಂದಿದ್ದರು. ಆದರೆ ಸಿದ್ದರಾಮಯ್ಯನವರು ಏನಾದರೂ ಪ್ರಿಂಟಿಂಗ್ ಮಷಿನ್ ಇಟ್ಟಿದ್ದರಾ? ರೈತರ ಪರ ಕಾಳಜಿಯಿಂದ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡಿದ್ರು ಎಂದು ಬಿಜೆಪಿ ವಿರುದ್ಧ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು.
Advertisement
Advertisement
ಕಾಂಗ್ರೆಸ್ ಎಂದಿಗೂ ಹಿಂದೂ ಮುಸ್ಲಿಂ ಅಂತಾ ರಾಜಕಾರಣ ಮಾಡಿಲ್ಲ. ಅದೇ ಬಿಜೆಪಿಗರು ಹಿಂದೂ ಮುಸ್ಲಿಂ ಅಂತಾ ಮತ ಕೇಳುತ್ತಾರೆ. ಬಿಜೆಪಿಯವರು ಎಂದಿಗೂ ಅಭಿವೃದ್ಧಿ ಹೇಳಿ ಮತ ಕೇಳುವುದಿಲ್ಲ. ಜೆಡಿಎಸ್‌ಗೆ ಒಂದೇ ಒಂದು ಮತ ಹಾಕಬೇಡಿ. ಜೆಡಿಎಸ್‌ಗೆ ಮತ ಹಾಕಿದ್ರೆ ಬಿಜೆಪಿಗೆ ಮತ ಹಾಕಿದಂತೆ ಎಂದರು. ಇದನ್ನೂ ಓದಿ: ಹುಕ್ಕೇರಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾನೇ : ಎ.ಬಿ. ಪಾಟೀಲ್
Advertisement
Advertisement
ಬಿಸಿಲಲ್ಲಿ ಹೋಗಿ ಮತ ಹಾಕಿ ಏನು ಪ್ರಯೋಜನ ಎಂದು ಮನೆಯಲ್ಲಿ ಕೂರಬೇಡಿ. ನೀವು ಮತ ಹಾಕದೇ ಇದ್ದರೂ ಅದು ಬಿಜೆಪಿಗೆ ಮತ ಹಾಕಿದಂತೆ ಆಗುತ್ತದೆ ಎಂದು ಮುಸ್ಲಿಂ ಮತದಾರರಿಗೆ ಜಮೀರ್ ಮನವಿ ಮಾಡಿದರು. ಇದನ್ನೂ ಓದಿ: ಹೆಬ್ಬಾಳ್ಕರ್ ಒಂದೂವರೆ ಲಕ್ಷ ಲೀಡ್‍ನಲ್ಲಿ ಬರಬಹುದು: ಜಮೀರ್