ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬುದೇ ನಮ್ಮ ಗುರಿಯಾಗಿರಬೇಕು – ಸ್ಟಾಲಿನ್‌ ಕರೆ

Public TV
2 Min Read
MK Stalin (1)

ಚೆನ್ನೈ: ಈ ದೇಶದಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರಬಾರದು ಎಂಬುದೋಂದೇ ನಮ್ಮ ಗುರಿಯಾಗಿರಬೇಕು. ಅದಕ್ಕಾಗಿ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ (MK Stalin) ಕರೆ ನೀಡಿದ್ದಾರೆ.

ತಿರುಚಿನಾಪಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟಾಲಿನ್‌, ಈ ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಬಿಡಬಾರದು ಎಂಬ ಒಂದೇ ಗುರಿಯನ್ನು ಎಲ್ಲರೂ ಹೊಂದಿರಬೇಕು. ಬಿಜೆಪಿ ವಿರುದ್ಧದ ಮತಗಳು ಯಾವುದೇ ಕಾರಣಕ್ಕೂ ವಿಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ.

aiadmk dmk bjp

ಪ್ರತಿಯೊಬ್ಬರಿಗೂ ಒಂದೇ ಗುರಿ ಇರಬೇಕು. ಅದು ಈ ದೇಶದಲ್ಲಿ ಮತ್ತೆ ಬಿಜೆಪಿಯನ್ನ ಅಧಿಕಾರಕ್ಕೆ ಬರಲು ಬಿಡಬಾರದು. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ಇರುವುದಿಲ್ಲ ಎಂದು ಎಚ್ಚರಿಸಿದರು. ಇದನ್ನೂ ಓದಿ: ಲೋಕಸಮರ ಗೆಲ್ಲೋಕೆ ಪ್ಲಾನ್- 5 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ಬಿಜೆಪಿ ಸರ್ವೇ

INDIA ಒಕ್ಕೂಟದಲ್ಲಿ ( INDIA Block) ಅಸಮಾಧಾನ: ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಆಮ್ ಆದ್ಮಿ ಪಕ್ಷವು ಹರಿಯಾಣದ ಎಲ್ಲಾ 90 ವಿಧಾನಸಭಾ ಸ್ಥಾನಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಪಕ್ಷದ ರಾಷ್ಟ್ರೀಯ ನಾಯಕರಿಗೆ ನಮ್ಮ ನಿಲುವನ್ನು ತಿಳಿಸಿದ್ದೇವೆ. ನಾವು ಪ್ರಬಲರಾಗಿರುವುದರಿಂದ ಚುನಾವಣೆಯಲ್ಲಿ ಮೈತ್ರಿ ಮತ್ತು ಸ್ವತಂತ್ರವಾಗಿಯೂ ಸ್ಪರ್ಧಿಸಬಹುದು. ಅಂತಿಮ ನಿರ್ಧಾರವನ್ನು ಪಕ್ಷದ ನಾಯಕರು ತೆಗೆದುಕೊಳ್ಳುತ್ತಾರೆ ಎಂದು ಎಎಪಿ ನಾಯಕ ಸುಶೀಲ್ ಗುಪ್ತಾ ಹೇಳಿದ್ದಾರೆ. ಇದರಿಂದ ಐಎನ್‌ಡಿಐಎ ಒಕ್ಕೂಟದಲ್ಲಿ ಅಸಮಾಧಾನ ತಲೆದೋರಿದೆ.

india meeting 2

ಈ ಬೆನ್ನಲ್ಲೇ ಬಿಹಾರದ ಮುಖ್ಯಮಂತ್ರಿ ಮಹಾಘಟಬಂಧನ್‌ (ಮಹಾಮೈತ್ರಿಕೂಟ) ಜೊತೆಗಿನ ಸಂಬಂಧ ಕಡಿದುಕೊಂಡು ಮತ್ತೆ ಬಿಜೆಪಿ ಜೊತೆಗೆ ಸರ್ಕಾರ ರಚಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳೂ ಇವೆ ಎಂದು ಜೆಡಿಯು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜೈಲಿನಲ್ಲಿ ಶ್ರೀರಾಮೋತ್ಸವ ಆಚರಿಸಿದ್ದಕ್ಕೆ ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ!

ಈ ಎಲ್ಲದರ ನಡುವೆ ರಾಷ್ಟ್ರವ್ಯಾಪಿ ಅನ್ಯಾಯದ ವಿರುದ್ಧ ಹೋರಾಡುವಲ್ಲಿ ಇಂಡಿಯಾ ಒಕ್ಕೂಟದ ಬಣಗಳ ಏಕತೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share This Article