ಬೆಂಗಳೂರು: ಮತ (Vote) ಹಾಕಲು ಮತದಾರರು ತಮ್ಮ ತಮ್ಮ ಊರಿಗೆ ಹೊರಟಿದ್ದು, ಸ್ವಗ್ರಾಮಕ್ಕೆ ತೆರಳಲು ಬಸ್ ಸಿಗದೇ ಪರದಾಡಿದ್ದಾರೆ.
ಬುಧವಾರ ನಡೆಯಲಿರುವ ಚುನಾವಣೆಗೆ (Election) ಸಕಲ ಸಿದ್ಧತೆಗಳು ನಡೆದಿದ್ದು, ಬಿಎಂಟಿಸಿ (BMTC) ಮತ್ತು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಮಂಗಳವಾರ ಕೇವಲ 4,900 ಬಸ್‌ಗಳ ಸೇವೆಗಳಿದ್ದು, 3,700 ಬಸ್‌ಗಳು ಹಾಗೂ ಚಾಲಕರನ್ನು ಚುನಾವಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಸ್ವಗ್ರಾಮಕ್ಕೆ ತೆರಳುವವರು ಬಸ್ ಸಿಗದೇ ಸಮಸ್ಯೆ ಎದುರಿಸಿದ್ದಾರೆ. ಇದನ್ನೂ ಓದಿ: ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ – ಮಹಿಳಾ ಇನ್‌ಸ್ಪೆಕ್ಟರ್ ಅಮಾನತು
Advertisement
Advertisement
ನೆಲಮಂಗಲ – ತುಮಕೂರು ರಸ್ತೆಯ ಜಾಸ್ ಟೋಲ್ ಬಳಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದು, ಬಸ್‌ಗಳ ಅಲಭ್ಯ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ರಾಹುಲ್ ದ್ರಾವಿಡ್ ಸ್ವಾಗತ ಕಮಾನು – ಯಂಗ್ ವೋಟರ್ಸ್ ಸೆಳೆಯಲು ಯುವ ಮತಗಟ್ಟೆ
Advertisement
Advertisement
ಮತದಾನ ಮಾಡುವ ಉತ್ಸಾಹದಲ್ಲಿ ಬಸ್‌ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಸಿಟ್ಟು ನೆತ್ತಿಗೇರಿತ್ತು. ಅಲ್ಲದೇ ಬಿಸಿಲಿನಲ್ಲಿ ಪುಟ್ಟಪುಟ್ಟ ಮಕ್ಕಳನ್ನು ಎತ್ತಿಕೊಂಡು ಗಂಟೆಗಟ್ಟಲೆ ಬಸ್ ಸಿಗದೇ ಕಾದ ಪ್ರಸಂಗ ನಡೆಯಿತು. ಇದನ್ನೂ ಓದಿ: ವೋಟ್ ಹಾಕೋಕೆ 2 ಕಿ.ಮೀ ನಡೆಯಬೇಕು – ಗ್ರಾಮದಲ್ಲಿ ಮತಗಟ್ಟೆ ತೆರೆಯಲು ಒತ್ತಾಯ
ಬರುವ ಕೆಲವು ಬಸ್‌ಗಳ ತುಂಬಾ ಜನರಿದ್ದು, ಕುಳಿತುಕೊಳ್ಳಲು ಸೀಟ್ ಇಲ್ಲದೇ ಕೆಲವು ಪ್ರಯಾಣಿಕರು ಊರಿಗೆ ಹೋಗದೇ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಅನೇಕರು ತಮ್ಮ ಚಿಕ್ಕ ಮಕ್ಕಳನ್ನು ಕಿಟಕಿಯ ಮೂಲಕ ಒಳಗೆ ನುಗ್ಗಿಸಿ ತಮ್ಮ ಸೀಟನ್ನು ಕಾಯ್ದಿರಿಸಿದ್ದಾರೆ. ಇನ್ನುಳಿದ ಪ್ರಯಾಣಿಕರು ಮತದಾನ ಮಾಡಲೇಬೇಕು ಎಂಬ ಸಲುವಾಗಿ ಬರುವ ಕೆಲವೇ ಕೆಲವು ಬಸ್‌ಗಳ ಮೇಲೇರಿ ಕುಳಿತು ಊರಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ವೋಟ್ ಹಾಕಿ, ಶಾಯಿ ಗುರುತು ತೋರಿಸಿದ್ರೆ ಮಾತ್ರ ಪ್ರವಾಸಿತಾಣಗಳಿಗೆ ಎಂಟ್ರಿ – ಕೊಡಗು ಡಿಸಿ