ಹಾಸನ: ಶ್ರೀನಗರ ಬಡಾವಣೆಯಲ್ಲಿ ಶಾಸಕ ಪ್ರೀತಂಗೌಡ (Preetham Gowda) ತಮಗೆ ಮತ (Vote) ಹಾಕುವಂತೆ ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಾವಣೆ ನಿವಾಸಿಗಳು ಶಾಸಕರ ಪರವಾಗಿ ನಿಂತಿದ್ದಾರೆ. ಶಾಸಕರು ನಮ್ಮನ್ನು ಸಹೋದರಿಯರು ಎಂದುಕೊಂಡಿದ್ದಾರೆ. ಅವರು ನಮಗೆ ಅಣ್ಣನ ಸಮಾನ. ಯಾರೋ ಕೆಲವರು ಶಾಸಕರ ವೀಡಿಯೋ ಮಾಡಿ ತಿರುಚಿ ಅದನ್ನು ವೈರಲ್ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳ ಕಿಡಿಕಾರಿದ್ದಾರೆ.
Advertisement
ನಮ್ಮ ಬಡಾವಣೆಯಲ್ಲಿ ಹಿಂದೂ, ಮುಸ್ಲಿಂ ಎನ್ನುವ ಭೇದಭಾವ ಇಲ್ಲ. ಎಲ್ಲರೂ ಒಂದಾಗಿ ಇದ್ದೇವೆ, ಇರ್ತೇವೆ. ಶಾಸಕರು ನಮ್ಮನ್ನು ಸಹೋದರಿಯರು ಎಂದುಕೊಂಡಿದ್ದಾರೆ. ಅವರು ನಮಗೆ ಅಣ್ಣನ ಸಮಾನ, ಆದರೆ ಇಂತಹವರಿಗೆ ವೋಟ್ ಹಾಕಿ ಎಂದು ನಮಗೆ ಯಾರ ಹೇಳುವಂತಿಲ್ಲ. ಅವರು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. 28 ವರ್ಷಗಳಿಂದ ನಮಗೆ ಯಾರು ಹಕ್ಕು ಪತ್ರ ನೀಡುವುದಾಗಿ ಬಂದಿಲ್ಲ. ಅಷ್ಟು ವರ್ಷಗಳಿಂದಲೂ ಇದೇ ಕೊಳಚೆ, ವಾಸನೆ, ಗಲೀಜು ನಡುವೆ ನಾವು ಬದುಕಿದ್ದೇವೆ. ಇದುವರೆಗೆ ಬಂದವರೆಲ್ಲಾ ಕೇವಲ ಭರವಸೆ ಕೊಟ್ಟು ವೋಟ್ ಹಾಕಿಸಿಕೊಂಡು ಹೋಗಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವೋಟ್ ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ: ಶಾಸಕ ಪ್ರೀತಂಗೌಡ
Advertisement
Advertisement
ಶಾಸಕ ಪ್ರೀತಂಗೌಡ ಅವರು ನಮ್ಮ ಕೆಲಸ ಮಾಡ್ತೀವಿ ಎಂದು ಬಂದಿದ್ದಾರೆ. ಅವರು ಮತ ನೀಡಿ ಎಂದು ಯಾವುದೇ ಬೆದರಿಕೆ ಹಾಕಿಲ್ಲ. ಯಾರೋ ಕೆಲವರು ಶಾಸಕರ ವೀಡಿಯೋ ಮಾಡಿ ತಿರುಚಿ ಅದನ್ನು ವೈರಲ್ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಧಿಕಾರಿಗೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ