ಕಾಂಗ್ರೆಸ್ಸಿಗೆ ಮತ ನೀಡದೇ ಇದ್ರೆ ಕೊಲ್ತೀನಿ: ಗ್ರಾಮಸ್ಥರಿಗೆ ಬಿಜೆಪಿ ಮುಖಂಡನಿಂದ ಬೆದರಿಕೆ

Public TV
1 Min Read
BJP FLAG

ಭೋಪಾಲ್: ಬಿಜೆಪಿ ಮುಖಂಡನೊಬ್ಬ ಕಾಂಗ್ರೆಸ್ಸಿಗೆ ಮತ ಹಾಕದೇ ಇದ್ದರೆ ಕೊಲೆ ಮಾಡುವುದಾಗಿ ಮತದಾರರಿಗೆ ಬೆದರಿಕೆ ಹಾಕಿರುವ ಆಡಿಯೋ ಈಗ ವೈರಲ್ ಆಗಿದೆ.

ಮಧ್ಯಪ್ರದೇಶದ ಜುರಹ ಗ್ರಾಮದ ಸರಪಂಚ್ ಆಗಿರುವ ಬಿಜೆಪಿ ನಾಯಕ ಪ್ರದೀಪ್ ಸಿಂಗ್ ಅಲಿಯಾಸ್ ಎಂಬಾತ ಮತದಾರರಿಗೆ ಕೊಲೆ ಬೆದರಿಕೆ ಹಾಕಿದ್ದು, ಈಗ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

congress flag

ಮಧ್ಯಪ್ರದೇಶದ ಚತಾರ್ಪುರ್ ಜಿಲ್ಲೆಯ ರಾಜ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆಯಿದೆ. ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜುರಹ ಗ್ರಾಮದ ಪ್ರದೀಪ್ ಸಿಂಗ್ ಅಲಿಯಾಸ್ ಧಂದೂ ಬೆದರಿಕೆಯೊಡಿದ್ದಾನೆಂದು ಗ್ರಾಮಸ್ಥರು ಈಗ ಆರೋಪಿಸಿದ್ದಾರೆ.

ಕಾಂಗ್ರೆಸ್ಸಿಗೆ ಮತ ಹಾಕದೇ ಇದ್ದರೆ ಡಿಸೆಂಬರ್ 12ರ ಒಳಗಡೆ ಗ್ರಾಮವನ್ನು ತೊರೆಯಬೇಕು. ಗ್ರಾಮವನ್ನು ತೊರೆಯದೇ ಇದ್ದರೆ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಜುರಹ ಗ್ರಾಮದ ನಿವಾಸಿ ಭಗೀರಥ ಕುಶ್ವಾಹ್ ಎಂಬುವರು ಚರ್ತಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಪ್ರದೀಪ್ ಸಿಂಗ್ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

congressflag 33

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *