– ಹಣ ಪಡೆದು ಮೊಬೈಲ್ ನಂಬರ್, OTP ಕೊಡ್ತಿದ್ದ ಕಾಲ್‌ಸೆಂಟರ್ ನಬೀ
ಬೆಂಗಳೂರು/ಕಲಬುರಗಿ: ಕಲಬುರಗಿಯ ಆಳಂದ ಕ್ಷೇತ್ರದಲ್ಲಿ (Aland constituency) ಮತಗಳ್ಳತನ ಆರೋಪ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ.
ಮತ ಕಳವು ಪ್ರಕರಣದ ಜಾಡು ಹಿಡಿದು ಹೊರಟ ವಿಶೇಷ ತನಿಖಾ ತಂಡ (SIT) ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡ್ತಿದ್ದ ನಬೀ ಎಂಬಾತನ್ನ ಬಂಧಿಸಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ ತಮಿಳುನಾಡು, ಪುದುಚೆರಿಗೂ ಸಂದ ಜಯ: ಡಿ.ಕೆ.ಶಿವಕುಮಾರ್
ಕಾಲ್‌ಸೆಂಟರ್ ಅಲ್ಲಿ ಕೆಲಸ ಮಾಡುತ್ತಾ ಇದ್ದ ನಭೀ, ಮತದಾರರ ಹೆಸರು ಡಿಲೀಟ್ ಮಾಡೋದಕ್ಕೆ ಓಟಿಪಿ ನೀಡ್ತಿದ್ದ. ಈ ಆರೋಪಿ ಮುಖಾಂತರವೇ ಓಟಿಪಿ ಪಡೆದುಕೊಂಡು ಡಿಲೀಟ್ ಪ್ರಕ್ರಿಯೆ ಮಾಡಲಾಗುತಿತ್ತು. ಹಣ ಪಡೆದು ಮೊಬೈಲ್ ನಂಬರ್ ನೀಡಿ ಒಟಿಪಿ ಕೂಡ ನೀಡುತ್ತಾ ಇದ್ದ ಸಂಬಂಧ ನಬೀಯನ್ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ.
ಈಗಾಗಲೇ ಪ್ರಕರಣ ಸಂಬಂಧ ಹಲವರಿಗೆ ಬಿಸಿ ಮುಟ್ಟಿಸಿದ್ದು, ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಈಗ ಪ್ರಕರಣದ ಆರೋಪಿಯ ಬಂಧನ ಬಳಿಕ ಇದರ ಹಿಂದಿನ ಕೈವಾಡ ಯಾರದ್ದು? ಮತಗಳವಿನಲ್ಲಿ ಭಾಗಿಯಾದವರಿಗೆ ಬಲೆ ಬೀಸಿದೆ. ಇದನ್ನೂ ಓದಿ: ಮುಧೋಳ | ಭುಗಿಲೆದ್ದ ರೈತರ ಆಕ್ರೋಶ – 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ, ಸಾವಿರಾರು ಟನ್ ಕಬ್ಬು ಭಸ್ಮ!


