ಕೀವ್: ಶೆಲ್ ದಾಳಿಯಲ್ಲಿ ಗಾಯಗೊಂಡ ಯುವತಿಯ ಆರೋಗ್ಯ ವಿಚಾರಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಸ್ಪತ್ರೆಗೆ ತೆರಳಿ ಧೈರ್ಯ ತುಂಬಿದ್ದಾರೆ.
ರಾಜಧಾನಿ ಕೀವ್‍ನ ವೊರ್ಜೆಲ್ ಪಟ್ಟಣದಿಂದ ಹೊರಡುವಾಗ ನಡೆದ ಶೆಲ್ ದಾಳಿಯಲ್ಲಿ 16 ವರ್ಷದ ಯುವತಿ ಗಾಯಗೊಂಡಿದ್ದಳು. ಆಕೆಯನ್ನು ಕಟ್ಯಾ ವ್ಲಾಸೆಂಕೊ ಎಂದು ಗುರುತಿಸಲಾಗಿದೆ. ಗಾಯಗೊಂಡ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಅಸ್ಸಾಂ ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು
Advertisement
Zelensky surprises victims in the hospital. He shook the hands of those injured bad one young girl told him he was very popular on TikTok #UkraineRussiaWar #UkraineUnderAttack #UkraineWar #Ukraine #RussiaUkraineCrisis pic.twitter.com/09LYoiLP9r
— Chilly Chills (@WeeliyumF) March 18, 2022
ಆಕೆಯನ್ನು ಭೇಟಿಯಾದ ಝಲೆನ್ಸ್ಕಿ ಅವರು ಮಾತನಾಡಿಸಿದ್ದಾರೆ. ಆಕೆಯನ್ನು ಟಿಕ್‍ಟಾಕ್ ಸ್ಟಾರ್ ಎಂದು ಗುರುತಿಸಿ ಹುರಿದುಂಬಿಸಿದ್ದಾರೆ. ಟಿಕ್‍ಟಾಕ್‍ನಲ್ಲಿ ಎಲ್ಲರೂ ನಿಮ್ಮನ್ನು ಬೆಂಬಲಿಸುತ್ತಾರೆ. ಆದ್ದರಿಂದಲೇ ನಾವು ಟಿಕ್‍ಟಾಕ್‍ನ್ನು ಬಳಸುತ್ತಿದ್ದೇವೆ ಎಂದು ಉಕ್ರೇನ್ ಅಧ್ಯಕ್ಷ ಆಕೆಗೆ ಹುರಿದುಂಬಿಸಿದ್ದಾರೆ. ಆಕೆಗೆ ಝೆಲೆನ್ಸ್ಕಿ ಅವರು ಬಿಳಿ ಮತ್ತು ಗುಲಾಬಿ ಬಣ್ಣದ ಹೂವುಗಳಿರುವ ಗುಚ್ಚವನ್ನು ನೀಡಿ, ಬೇಗ ಚೇತರಿಸಿಕೊಳ್ಳಿ ಎಂದು ಆಶಿಸಿದ್ದಾರೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ನಾನೂ ಹಿಂದೂ ಸಮಾಜದಲ್ಲಿಯೇ ಹುಟ್ಟಿದ್ದೇನೆ: ಎಚ್‍ಡಿಕೆ
Advertisement
Advertisement
ಶೆಲ್ ದಾಳಿಯಿಂದ ಉಕ್ರೇನಿಗರು ಊರು ತೊರೆಯುತ್ತದ್ದಾರೆ. ಕಟ್ಯಾ ಕುಟುಂಬವೂ ಸ್ಥಳಾಂತರವಾಗಲು ಹೊರಟಿತ್ತು. ಈ ವೇಳೆ ತನ್ನ ಕಿರಿಯ 8 ವರ್ಷದ ಸಹೋದರ ಇಹೋರ್ ಅನ್ನು ಆಲಂಗಿಸಿಕೊಂಡಿದ್ದಳು. ಇದರಿಂದ ಆತ ಸುರಕ್ಷಿತವಾಗಿ ಪಾರಾಗಿದ್ದಾನೆ. ಆದರೆ ಕಟ್ಯಾಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಹಾತ್ಮ ಗಾಂಧಿ ಧರ್ಮಪತ್ನಿ ಕೂಡ ತಲೆಗೆ ಸೆರಗು ಹಾಕುತ್ತಿದ್ದರು: ಹಿಜಬ್ ಬೆಂಬಲಿಸಿದ ಹೆಚ್‌ಡಿಕೆ